ದಿಲ್ಲಿ | 2.5 ಕೋಟಿ ರೂ.ಮೌಲ್ಯದ ಹೆರಾಯಿನ್ ವಶ, ಮಹಿಳೆ ಸೇರಿದಂತೆ ಇಬ್ಬರ ಬಂಧನ
Update: 2024-12-09 15:22 GMT
ಹೊಸದಿಲ್ಲಿ : ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿರುವ ದಿಲ್ಲಿ ಪೋಲಿಸರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 2.5 ಕೋಟಿ ರೂ.ಮೌಲ್ಯದ 402 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ಮಾಹಿತಿಯ ಮೇರೆಗೆ ಡಿ.7 ಮತ್ತು 8ರಂದು ಪೋಲಿಸರು ನಡೆಸಿದ ಕಾರ್ಯಾಚರಣೆಯಲ್ಲಿ 102 ಗ್ರಾಂ ಹೆರಾಯಿನ್ ಹೊಂದಿದ್ದ ಮಹಿಳೆಯನ್ನು ನರೇಲಾದಿಂದ ಬಂಧಿಸಲಾಗಿದೆ. ಮಹಿಳೆಯನ್ನು 2013ರಲ್ಲಿ ಇಂತಹುದೇ ಅಪರಾಧಕ್ಕಾಗಿ ಆಕೆಯ ಪತಿಯೊಂದಿಗೆ ಬಂಧಿಸಲಾಗಿದ್ದು, ಸದ್ಯ ಜಾಮೀನಿನಲ್ಲಿ ಹೊರಗಿದ್ದಳು. ಇನ್ನೋರ್ವ ಆರೋಪಿ, ಉತ್ತರ ಪ್ರದೇಶ ಮೂಲದ ಜಿಲಾನಿ ಎಂಬಾತನನ್ನು ಬವನಾದಲ್ಲಿ ಬಂಧಿಸಲಾಗಿದ್ದು, ಆತನಿಂದ 300 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ನಿಧಿನ್ ವಲ್ಸನ್ ತಿಳಿಸಿದರು.
ಜಿಲಾನಿ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದು, ಆತನ ವಿರುದ್ಧ ಉತ್ತರ ಪ್ರದೇಶ ಸಮಾಜ ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ ಮತ್ತು ಗೋಹತ್ಯೆ ಕಾಯ್ದೆಯಡಿ ಸೇರಿದಂತೆ ಹಲವು ಪ್ರಕರಣಗಳಿವೆ ಎಂದರು.