ದಿಲ್ಲಿಯ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ; ವಾರದಲ್ಲಿ ಎರಡನೇ ಬೆದರಿಕೆ ಸಂದೇಶ

Update: 2024-12-17 15:40 GMT

ಸಾಂದರ್ಭಿಕ ಚಿತ್ರ | PTI

ಹೊಸದಿಲ್ಲಿ: ದಿಲ್ಲಿಯ ಹಲವು ಶಾಲೆಗಳು ಮಂಗಳವಾರ ಬಾಂಬ್ ಬೆದರಿಕೆ ಸಂದೇಶ ಸ್ವೀಕರಿಸಿವೆ. ಇದು ಇಲ್ಲಿನ ಶಾಲೆಗಳಿಗೆ ಈ ವಾರದಲ್ಲಿ ಬಂದ ಎರಡನೇ ಬೆದರಿಕೆ ಸಂದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿ ಫಯರ್ ಸರ್ವೀಸ್ (ಡಿಪಿಎಸ್) ಆರ್‌ಕೆ ಪುರಂ ಶಾಲೆ ಸೇರಿದಂತೆ ಸುಮಾರು 20 ಶಾಲೆಗಳು ಸೋಮವಾರ ಬಾಂಬ್ ಬೆದರಿಕೆಯ ಈಮೇಲ್ ಸಂದೇಶವನ್ನು ಸ್ವೀಕರಿಸಿದ್ದವು ಎಂದು ಅವರು ತಿಳಿಸಿದ್ದಾರೆ.

ವಾಯುವ್ಯ ದಿಲ್ಲಿಯ ಸರಸ್ವತಿ ವಿಹಾರದಲ್ಲಿರುವ ಕ್ರೆಸೆಂಟ್ ಪಬ್ಲಿಕ್ ಸ್ಕೂಲ್ ಮಂಗಳವಾರ ಬಾಂಬ್ ಬೆದರಿಕೆಗೆ ಸಂಬಂಧಿಸಿದ ಕರೆ ಸ್ವೀಕರಿಸಿತು ಎಂದು ಡಿಎಫ್‌ಎಸ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು, ಬಾಂಬ್ ಪತ್ತೆ ತಂಡ ಹಾಗೂ ಶ್ವಾನ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದರು. ಆದರೆ, ಯಾವುದೇ ಸಂಶಯಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಇತರ ಹಲವು ಶಾಲೆಗಳು ಕೂಡ ಇದೇ ರೀತಿ ಬಾಂಬ್ ಬೆದರಿಕೆಯ ಇಮೇಲ್ ಸಂದೇಶವನ್ನು ಸ್ವೀಕರಿಸಿವೆ. ಆದರೆ, ಯಾವುದೇ ಶಂಕಾಸ್ಪದ ವಸ್ತು ಕಂಡು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News