ಚಳಿಯಿಂದ ಥರಗುಟ್ಟುತ್ತಿರುವ ದಿಲ್ಲಿ

Update: 2025-01-13 15:17 GMT

PC :  PTI 

ಹೊಸದಿಲ್ಲಿ : ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯ ವರದಿಯಂತೆ ದಿಲ್ಲಿಯಲ್ಲಿ ಸೋಮವಾರ 9.6 ಡಿ.ಸೆ.ಕನಿಷ್ಠ ತಾಪಮಾನ ದಾಖಲಾಗಿದ್ದು,ಇದು ವರ್ಷದ ಈ ಸಮಯದಲ್ಲಿ ಸಾಮಾನ್ಯಕ್ಕಿಂತ 2.2 ಡಿ.ಸೆ.ಅಧಿಕವಾಗಿದೆ. ರಾಷ್ಟ್ರ ರಾಜಧಾನಿಯಾದ್ಯಂತ ದಟ್ಟ ಮಂಜು ಆವರಿಸಿದ್ದ ಹಿನ್ನೆಲೆಯಲ್ಲಿ ಐಎಂಡಿ ಯೆಲ್ಲೊ ಅಲರ್ಟ್ ಹೊರಡಿಸಿದೆ.

ಬೆಳಿಗ್ಗೆ ದಟ್ಟ ಮಂಜಿನಿಂದಾಗಿ ವಿಮಾನ ಮತ್ತು ರೈಲುಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿದ್ದು, ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಡಿಮೆ ಗೋಚರತೆಯಿಂದಾಗಿ ಹಲವಾರು ಯಾನಗಳು ವಿಳಂಬಗೊಂಡು ಪ್ರಯಾಣಿಕರು ಪರದಾಡುವಂತಾಗಿತ್ತು.

ಹಲವಾರು ರೈಲುಗಳು ವಿಳಂಬಗೊಂಡಿದ್ದು, ಕೆಲವು ರದ್ದುಗೊಂಡಿದ್ದವು.

ಕಳಪೆ ವಾಯು ಗುಣಮಟ್ಟವು ದಿಲ್ಲಿಯಲ್ಲಿ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಬೆಳಿಗ್ಗೆ ಒಂಭತ್ತು ಗಂಟೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು 274ರ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ)ವನ್ನು ದಾಖಲಿಸಿದ್ದು,ದಿಲ್ಲಿಯ ವಾಯು ಗುಣಮಟ್ಟವನ್ನು ‘ಕಳಪೆ’ ವರ್ಗದಲ್ಲಿರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News