ದಿಲ್ಲಿಯ ವಾಯು ಗುಣಮಟ್ಟದಲ್ಲಿ ‘ತೀವ್ರ’ ಕುಸಿತ | ರಾಷ್ಟ್ರ ರಾಜಧಾನಿಯನ್ನು ಆವರಿಸಿದ ಮಾಲಿನ್ಯ ಭರಿತ ಮಂಜು

Update: 2024-11-05 15:13 GMT

PC : PTI 

ಹೊಸದಿಲ್ಲಿ, : ಚಳಿಗಾಲ ಹತ್ತಿರವಾಗುತ್ತಿದ್ದಂತೆಯೇ, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯನ್ನು ಮಂಗಳವಾರ ವಿಷಕಾರಿಯಾದ ಮಂಜು ಆವರಿಸಿದ್ದು, ಕೆಲವು ಪ್ರದೇಶಗಳ ವಾಯುಗುಣಮಟ್ಟವನ್ನು ‘‘ ತೀವ್ರತೆಯ’’ ಶ್ರೇಣಿಗೆ ಕೊಂಡೊಯ್ದಿದೆ. ಮಾಲಿನ್ಯದಿಂದ ಕೂಡಿದ ಶೀತ ವಾಯುವಿನಿಂದಾಗಿ ನಗರದಲ್ಲಿ ಉಸಿರಾಟದ ತೊಂದರೆಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ವಾಹನಗಳ ಹೊಗೆ, ಕಟ್ಟಡ ನಿರ್ಮಾಣ ಕಾಮಗಾರಿಯ ಧೂಳು ಹಾಗೂ ನೆರೆಯ ಪಂಜಾಬ್ ಹಾಗೂ ಹರ್ಯಾ ರಾಜ್ಯಗಳ ಹೊಲಗಳಲ್ಲಿ ಕಟಾವು ಮಾಡಿದ ಪೈರಿನ ಕೂಳೆಗಳಿಗೆ ಬೆಂಕಿ ಹಚ್ಚುವುದರಿಂದ ಹೊರಹೊಮ್ಮುವ ಹೊಗೆ. ಇವೆಲ್ಲವು ರಾಜಧಾನಿಯ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ.

ಸತತ ಆರು ದಿನಗಳಲ್ಲಿ ಹೊಸದಿಲ್ಲಿಯಲ್ಲಿ ವಾಯುಗುಣಮಟ್ಟವು ಅತ್ಯಂತ ಕಳಪೆಯಿಂದ ಹಿಡಿದು ತೀವ್ರತೆಯ ಶ್ರೇಣಿಲ್ಲಿದೆ ಎಂದು ಭೂವಿಜ್ಞಾನ ಸಚಿವಾಲಯ ತಿಳಿಸಿದೆ.

ಭಾರತದ ಅತ್ಯುನ್ನತ ವಾಯುಮಾಲಿನ್ಯ ಇಲಾಖೆಗಳು ದಿಲ್ಲಿಯ ವಾಯುಗುಣಮಟ್ಟ ಸೂಚ್ಯಂಕವನ್ನು 384ರಲ್ಲಿರಿಸಿದ್ದು, ಇದು ‘ಅತ್ಯಂತ ಕಳಪೆ ಶ್ರೇಣಿ’ ಎಂದು ಸಚಿವಾಲಯ ತಿಳಿಸಿದೆ. ಪರಿಸ್ಥಿತಿಯು ಗುರುವಾರದವರೆಗೂ ಇದೇ ರೀತಿ ಮುಂದುವರಿಯುವ ಸಾಧ್ಯತೆಯಿದೆಯೆಂದು ಅದು ಹೇಳಿದೆ.

401ರಿಂದ 500ರವರೆಗಿನ ವಾಯುಗುಣಮಟ್ಟ ಸೂಚ್ಯಂಕವನ್ನು ತೀವ್ರ ಶ್ರೇಣಿಯೆಂದು ಪರಿಗಣಿಸಲಾಗಿದ್ದು, ಇದು ಆರೋಗ್ಯವಂತ ವ್ಯಕ್ತಿಗಳ ಮೇಲೆತ ಪರಿಣಾಮವನ್ನು ಬೀರುತ್ತದೆ. ಆದರೆ ಶ್ವಾಸಕೋಶದ ಸಮಸ್ಯೆಯಿಂದ ಈಗಾಗಲೇ ಬಳಸಲುತ್ತಿರುವವರ ದೇಹಸ್ಥಿತಿ ಗಂಭೀರವಾಗುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News