ಕೇಜ್ರಿವಾಲ್‌ ಓರ್ವ ಮುಖ್ಯಮಂತ್ರಿ, ಅವರು ಪ್ರಚಾರ ನಡೆಸಬೇಕಿದೆ: ಸುಪ್ರೀಂ ಕೋರ್ಟ್‌

Update: 2024-05-07 07:34 GMT

Photo: PTI

ಹೊಸದಿಲ್ಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನವನ್ನು ಪ್ರಶ್ನಿಸಿ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಇಂದು ಜಾರಿ ನಿರ್ದೇಶನಾಲಯಕ್ಕೆ ಕೆಲ ಮಹತ್ವದ ಪ್ರಶ್ನೆಗಳನ್ನು ಕೇಳಿದೆ. “ತಪ್ಪು ಮಾಡಿದ್ದಾರೆಂಬುದಕ್ಕೆ ಸಾಕ್ಷ್ಯಗಳಿವೇ ಮತ್ತು ನಿರಪಾಧಿ ಎಂದು ತೋರಿಸಿಕೊಡುವ ಅಂಶಗಳಿವೆಯೇ?” ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

“ಇದು ಆಡಳಿತಾತ್ಮಕ ಕೆಲಸವೇ? ನೀವು ಎರಡರ ನಡುವೆ ಸಮತೋಲನ ಸಾಧಿಸಬೇಕಿದೆ. ಒಂದು ಅಂಶವನ್ನು ಹೊರತುಪಡಿಸುವ ಹಾಗಿಲ್ಲ. ನೀವು ಒಬ್ಬ ವ್ಯಕ್ತಿಯ ಜೀವನದ ಮೇಲಿನ ಹಕ್ಕನ್ನು ವಂಚಿತಗೊಳಿಸುತ್ತಿದ್ದೀರಿ, ಅರವಿಂದ್‌ ಕೇಜ್ರಿವಾಲ್‌ ಓರ್ವ ಮುಖ್ಯಮಂತ್ರಿ, ಅವರು ಪ್ರಚಾರ ನಡೆಸಬೇಕಿದೆ,” ಎಂದು ಜಸ್ಟಿಸ್‌ ದೀಪಾಂಕರ್‌ ದತ್ತ ಅವರು ಹೇಳಿದರು. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ದೀಪಾಂಕರ್‌ ದತ್ತಾ ಮತ್ತು ಸಂಜೀವ್‌ ಖನ್ನಾ ಅವರ ಪೀಠ ನಡೆಸುತ್ತಿದೆ.

“ಈ ಪ್ರಕರಣದಲ್ಲಿ ಕ್ರಮಕೈಗೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ಎರಡು ವರ್ಷ ಏಕೆ ಬೇಕಾಯಿತು ಎಂದು ಇಡಿ ಪರ ಹಾಜರಿರುವ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರನ್ನು ನ್ಯಾಯಾಲಯ ಪ್ರಶ್ನಿಸಿದೆ.

“ಇದಕ್ಕೆ ಎರಡು ವರ್ಷ ತಗಲಿದೆ. ಒಂದು ಪ್ರಕರಣ ಸಂಬಂಧ ಎರಡು ವರ್ಷ ತೆಗೆದುಕೊಳ್ಳುವುದು ಯಾವುದೇ ತನಿಖಾ ಏಜನ್ಸಿಗೆ ಸರಿಯಲ್ಲ… ಯಾವಾಗ ವಿಚಾರಣೆ ಆರಂಭಗೊಳ್ಳಲಿದೆ? ಒಂತು ಹಂತದಿಂದ ಇನ್ನೊಂದಕ್ಕೆ, ಪ್ರಕ್ರಿಯೆ ಆರಂಭಿಸಿ ಬಂಧಿಸಲು….” ಎಂದು ನ್ಯಾಯಾಲಯ ಕೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News