ಚುನಾವಣೋತ್ತರ ಸಮೀಕ್ಷೆ ಪ್ರಕಟ | ಮಹಾರಾಷ್ಟ್ರ – ಜಾರ್ಖಂಡ್ ನಲ್ಲಿ ಎನ್ ಡಿ ಎ ಗೆ ಬಹುಮತ ಎಂದ ಸಮೀಕ್ಷೆಗಳು
ಹೊಸದಿಲ್ಲಿ : ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಮತದಾನ ಮುಗಿದಿದ್ದು, ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ಹೆಚ್ಚಿನ ಸಮೀಕ್ಷೆಗಳು ಎರಡೂ ರಾಜ್ಯಗಳಲ್ಲಿ ಎನ್ ಡಿ ಎ ಗೆ ಬಹುಮತ ನೀಡಿವೆ.
ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟವು ಅಧಿಕಾರಕ್ಕೇರುವ ಸಾಧ್ಯತೆ ಹೆಚ್ಚು ಎಂದು ಸಮೀಕ್ಷೆಗಳು ಹೇಳಿವೆ. ಜಾರ್ಖಂಡ್ ನಲ್ಲಿ ಪಿ ಮಾರ್ಕ್ ಸಮೀಕ್ಷೆಯು ಇಂಡಿಯಾ ಮೈತ್ರಿಕೂಟಕ್ಕೆ ಬಹುಮತ ನೀಡಿದೆ. ಉಳಿದ ಸಮೀಕ್ಷೆಗಳು ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೇರುವ ಸಾಧ್ಯತೆಯಿದೆ ಎಂದು ಹೇಳಿದೆ.
ಮಹಾರಾಷ್ಟ್ರದಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳು 288. ಸರಳ ಬಹುಮತಕ್ಕೆ 145 ಸ್ಥಾನಗಳನ್ನು ಗೆಲ್ಲಬೇಕು. ಮ್ಯಾಟ್ರಿಜ್ ಸಮೀಕ್ಷೆಯ ಪ್ರಕಾರ, NDAಯು 150 ರಿಂದ 170 ಸ್ಥಾನ ಗಳಿಸಿದರೆ, MVAಯು 110 ರಿಂದ 130 ಸ್ಥಾನ ಗಳಿಸಲಿದೆ. ಇತರರು 8 ರಿಂದ 10 ಸ್ಥಾನ ಗಳಿಸಲಿದ್ದಾರೆ ಎಂದು ಮ್ಯಾಟ್ರಿಕ್ ಸಮೀಕ್ಷೆಯು ಹೇಳಿದೆ.
CNN ಸಮೀಕ್ಷೆ ಪ್ರಕಾರ, NDAಯು 154 ಸ್ಥಾನ ಗಳಿಸಿದರೆ, MVAಯು 128 ಸ್ಥಾನಕ್ಕೆ ಗಳಿಸಲಿದೆ. ಇತರರಿಗೆ 6 ಸ್ಥಾನಗಳು ಬರಲಿದೆ ಎಂದು ಭವಿಷ್ಯ ನುಡಿದಿದೆ.
P – Marq ಸಮೀಕ್ಷೆಯು NDAಗೆ 137 ರಿಂದ 157 ಸ್ಥಾನ ನೀಡಿದೆ. MVAಗೆ 126 ರಿಂದ 146 ಸ್ಥಾನಗಳು ಸಿಗಲಿದೆ ಎಂದು ಹೇಳಿದೆ. ಇತರರು 2 ರಿಂದ 8 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.
ಚಾಣಕ್ಯ ಎಸ್ ಸಮೀಕ್ಷೆ ಪ್ರಕಾರ, NDAಗೆ 157 ರಿಂದ 160, MVAಗೆ 130 ರಿಂದ 138, ಇತರರಿಗೆ 6 ರಿಂದ 8 ಸ್ಥಾನಗಳು ಬರುವ ನಿರೀಕ್ಷೆಯಿದೆ.
ಜಾರ್ಖಂಡ್ ನಲ್ಲಿ ಒಟ್ಟು 81 ವಿಧಾನಸಭಾ ಸ್ಥಾನಗಳಿವೆ. ಬಹುಮತ ಗಳಿಸಲು 41 ಸ್ಥಾನಗಳನ್ನು ಗೆಲ್ಲಬೇಕು. ಪಿ ಮಾರ್ಕ್ ಸಮೀಕ್ಷೆಯು ಇಂಡಿಯಾ ಒಕ್ಕೂಟಕ್ಕೆ 37 ರಿಂದ 47 ಸ್ಥಾನಗಳು ಬರಬಹುದು ಎಂದು ಅಂದಾಜಿಸಿದೆ. NDA ಮೈತ್ರಿಕೂಟಕ್ಕೆ 31 ರಿಂದ 40 ಸ್ಥಾನಗಳನ್ನು ನೀಡಿದೆ. ಇತರರಿಗೆ 1 ರಿಂದ 6 ಸ್ಥಾನಗಳ ಸಾಧ್ಯತೆಯನ್ನು ಸಮೀಕ್ಷೆಯು ಹೇಳಿದೆ.
ಮ್ಯಾಟ್ರಿಜ್ ಸಮೀಕ್ಷೆಯು BJP ಮೈತ್ರಿಕೂಟಕ್ಕೆ 42 ರಿಂದ 47 ಸ್ಥಾನಗಳು, ಕಾಂಗ್ರೆಸ್ ಮೈತ್ರಿಕೂಟಕ್ಕೆ 25 ರಿಂದ 30 ಸ್ಥಾನಗಳು, ಇತರರಿಗೆ 1 ರಿಂದ 4 ಸ್ಥಾನಗಳು ಬರಬಹುದು ಎಂದು ಅಂದಾಜಿಸಿದೆ.
JVC – S ಸಮೀಕ್ಷೆ ಪ್ರಕಾರ, BJP ಮೈತ್ರಿಕೂಟಕ್ಕೆ 40 ರಿಂದ 44, ಕಾಂಗ್ರೆಸ್ ಮೈತ್ರಿಕೂಟಕ್ಕೆ 30 ರಿಂದ 40, ಇತರರಿಗೆ 1 ಸ್ಥಾನ ಸಿಗುವ ಸಾಧ್ಯೆತೆಯಿದೆ ಎಂದು ಹೇಳಿದೆ.
ಪೋಲ್ ಆಫ್ ಪೋಲ್ಸ್ ಸಮೀಕ್ಷೆಯು BJP ಮೈತ್ರಿಕೂಟಕ್ಕೆ 47, ಕಾಂಗ್ರೆಸ್ ಮೈತ್ರಿಕೂಟಕ್ಕೆ 30, ಇತರರಿಗೆ 4 ಸ್ಥಾನಗಳನ್ನು ಅಂದಾಜಿಸಿದೆ.