ಕಿರಿಯ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ | ಬಿಎಸ್‌ಎಫ್ ಡಿಜಿ ಹುದ್ದೆಯಿಂದ ವಜಾ

Update: 2024-08-04 17:08 GMT

ನಿತಿನ್ ಅಗರ್ವಾಲ್ | PC : X/ @BSF_India

ಹೊಸದಿಲ್ಲಿ : ಕಿರಿಯ ಅಧಿಕಾರಿಗಳೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಹಾ ನಿರ್ದೇಶಕ(ಡಿಜಿ) ನಿತಿನ್ ಅಗರ್ವಾಲ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅಗರ್ವಾಲ್ ಹಾಗೂ ಅವರ ಉಪ ವಿಶೇಷ ಮಹಾ ನಿರ್ದೇಶಕ (ಪಶ್ಚಿಮ) ವೈ.ಬಿ. ಖುರಾನಿಯ ಅವರನ್ನು ಶುಕ್ರವಾರ ತಕ್ಷಣ ಜಾರಿಗೆ ಬರುವಂತೆ ಆಯಾ ರಾಜ್ಯ ಕೇಡರ್‌ಗೆ ಕಳುಹಿಸಿದೆ.

ಕಾರ್ಯಾಚರಣೆ ಕಾರಣಗಳು ಅಥವಾ ವೃತ್ತಿಪರ ಅಸಮರ್ಥತೆ ಹಿನ್ನೆಲೆಯಲ್ಲಿ ಬಿಎಸ್‌ಎಫ್ ಮಹಾ ನಿರ್ದೇಶಕರನ್ನು ಹುದ್ದೆಯಿಂದ ವಜಾಗೊಳಿಸಿಲ್ಲ. ಬದಲಾಗಿ ಹಿರಿಯ ಹುದ್ದೆಗಾಗಿ ಅವರು ಹಾಗೂ ಕಿರಿಯರ ನಡುವಿನ ಗಂಭೀರ ಭಿನ್ನಾಭಿಪ್ರಾಯದ ಕಾರಣಕ್ಕೆ ಅವರನ್ನು ವಜಾಗೊಳಿಸಲಾಗಿದೆ. ಬಿಕ್ಕಟ್ಟನ್ನು ನಿರ್ವಹಿಸಲು ಹಾಗೂ ಗಡಿಯನ್ನು ಕಾಯಲು ಸಮಯ ಮುಖ್ಯವಾಗಿರುವುದರಿಂದ ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳುವಂತೆ ಅವರಿಗೆ ಅನೇಕ ಬಾರಿ ಸೂಚಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಬಿಎಸ್‌ಎಫ್ ಅನ್ನು ಮುಖ್ಯ ಸ್ಥಳದಲ್ಲಿ ನಿಯೋಜಿಸಲಾಗಿದೆ ಹಾಗೂ ಪರಿಸ್ಥಿತಿ ಹದಗೆಡುತ್ತಿದೆ. ಇಂತಹ ಸಂದರ್ಭ ಉನ್ನತ ಸ್ಥಾನದಲ್ಲಿರುವವರು ಜಗಳವಾಡುತ್ತಿದ್ದಾರೆ. ಪರಿಸ್ಥಿತಿ ಹಣಾಹಣಿ ಹಂತಕ್ಕೆ ತಲುಪಿದೆ. ಸರಕಾರ ಈ ಬಗ್ಗೆ ಸ್ಪಷ್ಟ ನಿಲುವು ಹೊಂದಿದೆ. ಅಶಿಸ್ತು ಹಾಗೂ ಭಿನ್ನಾಭಿಪ್ರಾಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಸರಕಾರದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News