ವಿವಾಹ ವಿಚ್ಛೇದನ: 89 ವರ್ಷದ ವೃದ್ಧನಿಗೆ ಅನುಮತಿ ನಿರಾಕರಿಸಿದ ಸುಪ್ರೀಂಕೋರ್ಟ್

Update: 2023-10-13 18:14 GMT

ಹೊಸದಿಲ್ಲಿ: ವಯೋವೃದ್ಧರೊಬ್ಬರು ಆರು ದಶಕಗಳ ದಾಂಪತ್ಯದ ಬಳಿಕ ತನ್ನ ಪತ್ನಿಗೆ ವಿವಾಹವಿ ಚ್ಛೇದನವನ್ನು ನೀಡುವುದಕ್ಕೆ ಸುಪ್ರೀಂಕೋರ್ಟ್ ಅನುಮತಿ ನಿರಾಕರಿಸಿದೆ. ತನ್ನ ವಿವಾಹವನ್ನು ಅನೂರ್ಜಿತಗೊಳಿಸುವಂತೆ ಕೋರಿ ಈ ವೃದ್ಧ ವ್ಯಕ್ತಿಯು, 27 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರ 89 ವರ್ಷ ನಿರ್ಮಲ್ ಸಿಂಗ್ ಪನೇಸರ್ ಅವರು 1963ರಲ್ಲಿ ವಿವಾಹವಾಗಿದ್ದರು. ಭಾರತೀಯ ವಾಯುಪಡೆಯಲ್ಲಿ ಉದ್ಯೋಗಿಯಾಗಿದ್ದ ಅವರಿಗೆ 1984ನೇ ಇಸವಿಯಲ್ಲಿ ಚೆನ್ನೈಗೆ ವರ್ಗಾವಣೆಯಾದಾಗ ಪತ್ನಿ ಪರಮಜಿತ್ ಕೌರ್ ಪನೇಸರ್ (ಈಗ 82 ವರ್ಷ ವಯಸ್ಸು), ಅವರೊಂದಿಗೆ ಬರಲು ನಿರಾಕರಿಸಿದ್ದರು.

ಪತ್ನಿ ತನ್ನನ್ನು ತೊರೆದಿದ್ದಾಳೆಂದು ಆರೋಪಿಸಿ ನಿರ್ಮಲ್ 1996ರಲ್ಲಿ ವಿವಾಹವಿಚ್ಚೇದನಕ್ಕಾಗಿ ಜಿಲ್ಲಾ ನ್ಯಾಯಾಲಯವೊಂದರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಪರಮಜಿತ್ ಕೌರ್ ಮಾಡಿದ ಮನವಿಯಿಂದಾಗಿ 2000ನೇ ಇಸವಿಯಲ್ಲಿ ಅದನ್ನು ತಿರಸ್ಕರಿಸಲಾಗಿತ್ತು.

ಆನಂತರ ಪನೇಸರ್ ಅವರು ವಿವಾಹವಿಚ್ಚೇದನ ಕೋರಿ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.

ಭಾರತದಲ್ಲಿ ವಿವಾಹ ವ್ಯವಸ್ಥೆಯನ್ನು ಈಗಲೂ ಅತ್ಯಂತ ಪವಿತ್ರ, ಅಧ್ಯಾತ್ಮಿಕ ಮತ್ತು ಪತಿ-ಪತ್ನಿ ನಡುವಿನ ಅಮೂಲ್ಯವಾದ ಬಂಧವೆಂಬುದಾಗಿ ಪರಿಗಣಿಸಲಾಗುತ್ತದೆ ಎಂದು ಪನೇಸರ್ ಅವರ ವಿವಾಹ ವಿಚ್ಚೇದನ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯವು ತೀರ್ಪಿನಲ್ಲಿ ತಿಳಿಸಿದೆ.

ಒಂದು ನ್ಯಾಯಾಲಯವು ವಿಚ್ಚೇದನಕ್ಕೆ ಅನುಮತಿ ನೀಡಿದಲ್ಲಿ , ವಿಚ್ಚೇದಿತಳೆಂಬ ಕಳಂಕದೊಂದಿಗೆ ಸಾಯಲು ತಾನು ಬಯಸುವುದಿಲ್ಲವೆಂದು ಹೇಳಿರುವ ಪರಮ್ಜಿತ್ ಗೆ ಅನ್ಯಾಯ ಮಾಡಿದಂತಾಗುವುದೆಂದು ಸುಪ್ರೀಂಕೋರ್ಟ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News