ಕಾಶ್ಮೀರ ಕಣಿವೆಯ ಮೊದಲ ಮುಸ್ಲಿಂ ಐಎಎಸ್ ಅಧಿಕಾರಿ ಮುಹಮ್ಮದ್ ಶಫಿ ಪಂಡಿತ್ ನಿಧನ

Update: 2024-09-19 06:37 GMT

ಮುಹಮ್ಮದ್ ಶಫಿ ಪಂಡಿತ್ (Photo: Facebook) 

ಶ್ರೀನಗರ: ಕಾಶ್ಮೀರ ಕಣಿವೆಯ ಮೊದಲ ಮುಸ್ಲಿಂ ಐಎಎಸ್ ಅಧಿಕಾರಿ ಮುಹಮ್ಮದ್ ಶಫಿ ಪಂಡಿತ್ ಗುರುವಾರ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಪಂಡಿತ್, ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

1969ರಲ್ಲಿ ನಡೆದಿದ್ದ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಕಾಶ್ಮೀರದ ಪ್ರಪ್ರಥಮ ಮುಸ್ಲಿಂ ಅಭ್ಯರ್ಥಿ ಪಂಡಿತ್ ಆಗಿದ್ದರು. ಅವರು ಸ್ವಾಯತ್ತ ಜಮ್ಮು ಮತ್ತು ಕಾಶ್ಮೀರದ ನಾಗರಿಕ ಸೇವಾ ಆಯೋಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.

ಮೃದು ಮಾತಿನ ಪಂಡಿತ್, ಹಲವಾರು ನಾಗರಿಕ ಸಂಘಟನೆಗಳ ಭಾಗವಾಗಿದ್ದರು. 1992ರಲ್ಲಿ ಭಾರತ ಸರಕಾರದ ಜಂಟಿ ಕಾರ್ಯದರ್ಶಿಯಾಗಿದ್ದ ಪಂಡಿತ್, ಮಂಡಲ್ ಆಯೋಗದ ವರದಿ ಜಾರಿಯಾಗುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಪಂಡಿತ್ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನದ ವೇಳೆಗೆ ಶ್ರೀನಗರಕ್ಕೆ ತರಲಾಗುತ್ತದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News