ಆಪ್ ನ ಮಾಜಿ ಸಂಸದ ಧರ್ಮವೀರ್ ಗಾಂಧಿ ಕಾಂಗ್ರೆಸ್ ಗೆ ಸೇರ್ಪಡೆ

Update: 2024-04-01 15:23 GMT

Photo: X \ @AshishSinghKiJi

ಹೊಸದಿಲ್ಲಿ : ಪಂಜಾಬ್ ಪಟಿಯಾಲದ ಆಪ್ ನ ಮಾಜಿ ಸಂಸದ ಧರ್ಮವೀರ್ ಗಾಂಧಿ ಅವರು ಇಲ್ಲಿ ಸೋಮವಾರ ಕಾಂಗ್ರೆಸ್ ಗೆ ಸೇರ್ಪಡೆಯಾದರು.

ಧರ್ಮವೀರ್ ಗಾಂಧಿ ಅವರು ಪಟಿಯಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.

2014ರ ಲೋಕಸಭಾ ಚುನಾವಣೆಯಲ್ಲಿ ಪಟಿಯಾಲದಿಂದ ಆಪ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಧರ್ಮವೀರ ಗಾಂಧಿ ಅವರು ಪ್ರಣೀತ್ ಕೌರ್ ವಿರುದ್ಧ ಜಯ ಗಳಿಸಿದ್ದರು.

ವೃತ್ತಿಯಲ್ಲಿ ವೈದ್ಯರಾಗಿರುವ ಧರ್ಮವೀರ ಗಾಂಧಿ ಅನಂತರ 2016ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ತನ್ನ ಸ್ವಂತ ಪಕ್ಷವಾದ ನವಾನ್ ಪಂಜಾಬ್ ಪಕ್ಷ ಆರಂಭಿಸಿದ್ದರು. ಬಳಿಕ ಸೋಮವಾರ ಅದನ್ನು ಕಾಂಗ್ರೆಸ್ ನೊಂದಿಗೆ ವಿಲೀನಗೊಳಿಸಿದರು.

ಕಾಂಗ್ರೆಸ್ ನಾಯಕ ಪವನ್ ಖೇರಾ ಹಾಗೂ ಪಂಜಾಬ್ ನ ಎಐಸಿಸಿ ಉಸ್ತುವಾರಿ ದೇವೇಂದ್ರ ಯಾದವ್, ಪಂಜಾಬ್ ಕಾಂಗ್ರೆಸ್ ವರಿಷ್ಠ ಅಮರಿಂದರ್ ಸಿಂಗ್ ರಾಜಾ ಹಾಗೂ ಸಿಎಲ್ಪಿ ನಾಯಕ ಪ್ರತಾಪ್ ಸಿಂಗ್ ಬಜ್ವಾ ಅವರು ಧರ್ಮವೀರ ಗಾಂಧಿ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News