ವಿದೇಶಿಯರ ಕುರಿತ ಗುವಾಹತಿ ಹೈಕೋರ್ಟ್ ತೀರ್ಪು: 25 ಸಾವಿರ ಮಂದಿಗೆ ಗಡೀಪಾರು ಭೀತಿ

Update: 2025-01-10 06:24 GMT

ಗುವಾಹತಿ: ಗುವಾಹತಿ ಹೈಕೋರ್ಟ್ ಗುರುವಾರ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ 25 ಸಾವಿರ ಮಂದಿ ಬಾಂಗ್ಲಾದೇಶಿ ವಲಸಿಗರು ಗಡೀಪಾರು ಭೀತಿ ಎದುರಿಸುವಂತಾಗಿದೆ. 1966ರಿಂದ 1971ರ ನಡುವೆ ಭಾರತಕ್ಕೆ ಆಗಮಿಸಿ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ (FRRO) ಬಳಿ ನೋಂದಾಯಿಸಿಕೊಳ್ಳದೇ ನ್ಯಾಯಮಂಡಳಿಗಳಿಂದ ವಿದೇಶಿಯರು ಎಂದು ಘೋಷಿಸಲ್ಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಇದಾಗಿದೆ.

FRRO ಬಳಿ ನೋಂದಣಿಗೆ ಅವಕಾಶ ವಿಸ್ತರಿಸುವಮತೆ ಕೋರಿ ಬೇಗಮ್ ಝೆನ್ ಎಂಬವರು ಸಲ್ಲಿಸಿದ ಮೇಲ್ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಬರ್ಪೇಟಾ ವಿದೇಶಿಯರ ನ್ಯಾಯಮಂಡಳಿ ಈಕೆಯನ್ನು 2020ರ ಜೂ 29ರಂದು ವಿದೇಶಿಯರು ಎಂದು ಘೋಷಿಸಿತ್ತು. ಆದರೂ ನಿಗದಿತ ಗಡುವಿನೊಳಗೆ ನೋಂದಣಿ ಮಾಡಿಕೊಳ್ಳಲು ಮಹಿಳೆ ವಿಫಲರಾಗಿದ್ದರು. ಸುಪ್ರೀಂಕೋರ್ಟ್ ಇತ್ತೀಚಿಗೆ ನೀಡಿದ ತೀರ್ಪಿನ ಬದ್ಧತೆ ಸ್ವರೂಪದ ಕಾರಣ ನೀಡಿ ಹೈಕೋರ್ಟ್ ಇವರ ಮೇಲ್ಮನವಿ ತಿರಸ್ಕರಿಸಿದೆ.

1955ರ ಪೌರತ್ವ ಕಾಯ್ದೆಯ ಸೆಕ್ಷನ್ 6ಎ(2) ಅನ್ವಯ, 1966ರ ಜನವರಿ 1 ರಿಂದ ಮೊದಲ ಅಸ್ಸಾಂ ಪ್ರವೇಶಿಸಿದವರಿಗೆ ಪೌರತ್ವ ನೀಡಲಾಗುತ್ತದೆ. ಸೆಕ್ಷನ್ 6ಎ(3)ರಲ್ಲಿ 1966ರ ಜನವರಿ 1 ರಿಂದ 1971 ಮಾರ್ಚ್ 25ರ ನಡುವೆ ಭಾರತ ಪ್ರವೇಶಿಸಿದ ವರ್ಗ ಬರುತ್ತದೆ. ಈ ಗುಂಪು ವಿದೇಶಿಯರು ಎಂದು ಘೋಷಿಸಲ್ಪಟ್ಟ 30 ದಿನಗಳ ಒಳಗಾಗಿ FRRO ಬಳಿ ನೋಂದಾಯಿಸಿಕೊಳ್ಳುವುದು ಕಡ್ಡಾಯ.

ಸುಮಾರು 5 ಸಾವಿರ ಮಂದಿ ಈ ನೋಂದಣಿ ಗಡುವಿನೊಳಗೆ ತಮ್ಮ ಕುಟುಂಬದ ಹೆಸರು ನೊಂದಾಯಿಸಲು ವಿಫಲರಾಗಿದ್ದು, ಒಟ್ಟು 25 ಸಾವಿರ ಮಂದಿ ಬಾಂಗ್ಲಾದೇಶಕ್ಕೆ ಗಡೀಪಾರಾಗುವ ಭೀತಿ ಎದುರಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News