ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ

Update: 2024-08-29 07:49 GMT

ಮುಕೇಶ್ ಅಂಬಾನಿ / ಗೌತಮ್ ಅದಾನಿ (Photo: PTI)

ಮುಂಬೈ: ಹುರುನ್ ಇಂಡಿಯಾವು ಅತ್ಯಂತ ಶ್ರೀಮಂತ ಭಾರತೀಯರ ಪಟ್ಟಿ ಬಿಡುಗಡೆ ಮಾಡಿದ್ದು, ರಿಲಯನ್ಸ್ ನ ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕಿ ಗೌತಮ್ ಅದಾನಿ ಅತ್ಯಂತ ಶ್ರೀಮಂತ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

11.6 ಲಕ್ಷ ಕೋಟಿ ಸಂಪತ್ತನ್ನು ಹೊಂದಿರುವ ಗೌತಮ್ ಅದಾನಿ ಅವರು ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ 2024 ರ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ.

ಜುಲೈ 31, 2024 ರವರೆಗಿನ ಸಂಪತ್ತಿನ ಲೆಕ್ಕಾಚಾರದಂತೆ ಪಟ್ಟಿ ಬಿಡುಗಡೆ ಮಾಡಲಾಗಿದೆ.

“ಭಾರತವು ಏಷ್ಯಾದ ಸಂಪತ್ತು ಸೃಷ್ಟಿ ಇಂಜಿನ್ ಆಗಿ ಹೊರಹೊಮ್ಮುತ್ತಿದೆ! ಚೀನಾ ತನ್ನ ಬಿಲಿಯನೇರ್‌ (ಶತಕೋಟ್ಯಾಧಿಪತಿ)ಗಳ ಸಂಖ್ಯೆಯಲ್ಲಿ 25% ಕುಸಿತವನ್ನು ಕಂಡರೆ, ಭಾರತವು 29% ಹೆಚ್ಚಳವನ್ನು ಕಂಡಿದೆ. ಭಾರತದಲ್ಲಿ ಬಿಲಿಯನೇರ್‌ ಗಳ ಸಂಖ್ಯೆ ದಾಖಲೆಯ 334ಕ್ಕೆ ತಲುಪಿದೆ" ಎಂದು ಹುರುನ್ ಇಂಡಿಯಾದ ಸಂಸ್ಥಾಪಕ ಮತ್ತು ಮುಖ್ಯ ಸಂಶೋಧಕ ಅನಸ್ ರಹಮಾನ್ ಜುನೈದ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News