‘2024ರ ಶ್ರೇಷ್ಠ ದೇಶಗಳು’ ಪಟ್ಟಿಯಲ್ಲಿ 33ನೇ ಸ್ಥಾನಕ್ಕೆ ಇಳಿದ ಭಾರತ

Update: 2024-09-10 15:04 GMT

ಸಾಂದರ್ಭಿಕ ಚಿತ್ರ | PC : NDTV

ಹೊಸದಿಲ್ಲಿ: ಯುಎಸ್ ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್‌ನ ‘2024ರ ಶ್ರೇಷ್ಠ ದೇಶಗಳು’ ಪಟ್ಟಿಯಲ್ಲಿ ಭಾರತ 33ನೇ ಸ್ಥಾನವನ್ನು ಗಳಿಸಿದೆ. ಕಳೆದ ವರ್ಷದ ಪಟ್ಟಿಗೆ ಹೋಲಿಸಿದರೆ, ಈ ಬಾರಿಯ ಪಟ್ಟಿಯಲ್ಲಿ ಭಾರತ ಮೂರು ಸ್ಥಾನಗಳಷ್ಟು ಕೆಳಗೆ ಜಾರಿದೆ.

ಪಟ್ಟಿಯ ಅಗ್ರ ಸ್ಥಾನದಲ್ಲಿ ಸ್ವಿಟ್ಸರ್‌ಲ್ಯಾಂಡ್ ಇದೆ. ಸ್ವಿಟ್ಸರ್‌ಲ್ಯಾಂಡ್ ಸತತ ಮೂರನೇ ಬಾರಿಗೆ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಎರಡನೇ ಸ್ಥಾನವನ್ನು ಜಪಾನ್ ಪಡೆದಿದೆ.

ಏಶ್ಯಾದಿಂದ ಜಪಾನ್, ಸಿಂಗಾಪುರ, ಚೀನಾ ಮತ್ತು ದಕ್ಷಿಣ ಕೊರಿಯಕ್ಕೆ ಮಾತ್ರ ಅಗ್ರ 25ರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ.

ಸಾಹಸ, ಕ್ರಿಯಾಶೀಲತೆ, ಪರಂಪರೆ, ಉದ್ಯಮಶೀಲತೆ, ಬದುಕಿನ ಗುಣಮಟ್ಟ, ಸಾಂಸ್ಕೃತಿಕ ಹಿನ್ನೆಲೆ ಮುಂತಾದ 10 ವಿವಿಧ ಕ್ಷೇತ್ರಗಳಲ್ಲಿ ದೇಶಗಳ ಸಾಧನೆಗಳನ್ನು ಗಣನೆಗೆ ತೆಗೆದುಕೊಂಡು 89 ದೇಶಗಳಿಗೆ ಸ್ಥಾನಗಳನ್ನು ನೀಡಲಾಗುತ್ತದೆ. ದೇಶಗಳ ಸಂಪತ್ತಿಗೂ ಹೊರತಾದ ವಿಷಯಗಳನ್ನು ಇಲ್ಲಿ ಪರಿಗಣಿಸಲಾಗುತ್ತದೆ.

ಈ ಪಟ್ಟಿಯಲ್ಲಿ ಸ್ವಿಟ್ಸರ್‌ಲ್ಯಾಂಡ್ ಪ್ರಥಮ ಸ್ಥಾನ ಪಡೆಯುತ್ತಿರುವುದು ಇದು ಏಳನೇ ಬಾರಿಯಾಗಿದೆ. ಪಟ್ಟಿಯ ಅಗ್ರ 25ರಲ್ಲಿ ಯುರೋಪಿಯನ್ ದೇಶಗಳೇ ಹೆಚ್ಚಿನ ಸ್ಥಾನಗಳನ್ನು ಆಕ್ರಮಿಸಿವೆ.

ಪಟ್ಟಿಯ ಎರಡನೇ ಸ್ಥಾನದಲ್ಲಿ ಜಪಾನ್, ಮೂರನೇ ಸ್ಥಾನದಲ್ಲಿ ಅಮೆರಿಕ, ನಾಲ್ಕನೇ ಸ್ಥಾನದಲ್ಲಿ ಕೆನಡ ಮತ್ತು ಐದನೇ ಸ್ಥಾನದಲ್ಲಿ ಆಸ್ಟ್ರೇಲಿಯ ದೇಶಗಳಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News