ಗುಜರಾತ್ | ಗೋದಾಮಿನಲ್ಲಿ ರಾಸಾಯನಿಕ ಸೋರಿಕೆಯಾಗಿ ಅಗ್ನಿ ಅವಘಡ: ಮೂವರು ಕಾರ್ಮಿಕರು ಮೃತ್ಯು

Update: 2024-11-09 10:51 GMT

ಸಾಂದರ್ಭಿಕ ಚಿತ್ರ |  PC : freepik.com

 

ನವಸಾರಿ: ಗೋದಾಮೊಂದರಲ್ಲಿ ರಾಸಾಯನಿಕ ಸೋರಿಕೆಯಾಗಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಕಾರ್ಮಿಕರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ಬಿಲ್ಲಿಮೋರಿಯ ತಾಲ್ಲೂಕಿನ ದೇವಸಾರ ಗ್ರಾಮದಲ್ಲಿ ಟ್ರಕ್ ಒಂದರಿಂದ ರಾಸಾಯನಿಕ ತುಂಬಿರುವ ಬ್ಯಾರೆಲ್‌ಗಳನ್ನು ಕೆಳಗಿಳಿಸುವಾಗ, ರಾಸಾಯನಿಕ ಸೋರಿಕೆಯಾಗಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ.ಗೋಹಿಲ್ ತಿಳಿಸಿದ್ದಾರೆ.

"ಈ ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಅವರನ್ನೆಲ್ಲ ಆಸ್ಪತ್ರೆಗೆ ಸಾಗಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

ಸಮೀಪದ ತಾಲೂಕುಗಳಿಂದ ಐದು ಅಗ್ನಿ ಶಾಮಕ ವಾಹನಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಟ್ರಕ್‌ನಲ್ಲಿನ ಬ್ಯಾರೆಲ್ ಒಂದರಿಂದ ರಾಸಾಯನಿಕ ಸೋರಿಕೆಯಾಗಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಮಾಮ್ಲಾದಾರ್ ಜಗದೀಶ್ ಚೌಧರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News