ಕೇರಳದಾದ್ಯಂತ ಭಾರೀ ಮಳೆ: ಆರೇಂಜ್ ಅಲರ್ಟ್

Update: 2023-07-06 17:12 GMT

ಸಾಂದರ್ಭಿಕ ಚಿತ್ರ \ Photo: PTI 

ತಿರುವನಂತಪುರಂ: ಕೇರಳದ ಹಲವು ಭಾಗಗಳಲ್ಲಿ ಕೆಲವು ದಿನಗಳಿಂದ ಭಾರೀ ಪ್ರಮಾಣದಲಿ ಮಳೆ ಸುರಿಯುತ್ತಿದೆ. ಪ್ರವಾಹದಿಂದಾಗಿ ಶಾಲೆಗಳು ಮುಚ್ಚಿವೆ ಮತ್ತು ಜನರು ತಮ್ಮ ಮನೆಗಳನ್ನು ತೊರೆದು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಇಡುಕ್ಕಿ, ಮಲಪ್ಪುರಂ, ಕೊಝಿಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು- ಈ ಆರು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಕಿತ್ತಳೆ ಬಣ್ಣದ ಎಚ್ಚರಿಕೆ ಹೊರಡಿಸಿದೆ.

ಕಿತ್ತಳೆ ಬಣ್ಣದ ಎಚ್ಚರಿಕೆಯೆಂದರೆ, ಪರಿಸ್ಥಿತಿ ಗಂಭೀರವಾಗಿದೆ ಮತ್ತು ಅದು ಇನ್ನಷ್ಟು ಹದಗೆಡಬಹುದು ಎನ್ನುವ ಸೂಚನೆಯಾಗಿದೆ.

ಕಾಸರಗೋಡು ಜಿಲ್ಲೆಯ ವೆಲ್ಲರಿಕುಂಡು ಹಾಗೂ ಕಣ್ಣೂರು ಜಿಲ್ಲೆಯ ತಲಶ್ಶೇರಿ ಮತ್ತು ಪೆರಿಂಗೋಮ್ಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ.

ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಾಮಾನ್ಯ ಜನಜೀವನ ಹದಗೆಟ್ಟಿದೆ. ರಸ್ತೆಗಳಲ್ಲಿ ಪ್ರವಾಹದ ನೀರು ಹರಿಯುತ್ತಿದೆ, ನದಿಗಳು ಮತ್ತು ಅಣೆಕಟ್ಟೆಗಳ ನೀರಿನ ಮಟ್ಟ ಹೆಚ್ಚುತ್ತಿದೆ, ಮರಗಳು ಉರುಳಿ ಮನೆಗಳಿಗೆ ಹಾನಿಯಾಗಿದೆ, ಕರಾವಳಿ ಪ್ರದೇಶಗಳಲ್ಲಿ ಪ್ರಕ್ಷಬ್ಧ ಕಡಲು ದಾಂಧಲೆಗೈಯುತ್ತಿದೆ.

ಇಡುಕ್ಕಿ ಜಿಲ್ಲೆಯ ಮಲಂಕಾರ ಅಣೆಕಟ್ಟೆ ಸೇರಿದಂತೆ ಹಲವು ಅಣೆಕಟ್ಟೆಗಳ ನೀರನ್ನು ಹೊರಬಿಡಲಾಗಿದೆ. ಬುಧವಾರ ಪತ್ತನಮ್ತಿಟ್ಟ ಜಿಲ್ಲೆಯಲ್ಲಿ ಕಕ್ಕಡ್ ನದಿಗೆ ಕಟ್ಟಲಾಗಿರುವ ಕರಿಕ್ಕಯಮ್ ಮತ್ತು ಉಲ್ಲುಂಕಲ್ ಅಣೆಕಟ್ಟುಗಳು ಹಾಗೂ ಕಕ್ಕತ್ತರ್ ನದಿಗೆ ಕಟ್ಟಲಾಗಿರುವ ಮನಿಯಾರ್ ಅಣೆಕಟ್ಟುಗಳ ಬಾಗಿಲುಗಳನ್ನು ತೆರೆಯಲಾಗಿದೆ. ಹಲವು ನೂರು ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News