ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಬಿಕ್ಕಟ್ಟಿನ ಬೆನ್ನಿಗೇ 15 ಮಂದಿ ಬಿಜೆಪಿ ಶಾಸಕರನ್ನು ಉಚ್ಚಾಟಿಸಿದ ಹಿಮಾಚಲ ಪ್ರದೇಶ ಸ್ಪೀಕರ್
ಹೊಸದಿಲ್ಲಿ: ಘೋಷಣೆ ಕೂಗಿದ್ದಕ್ಕೆ ಹಾಗೂ ಅಸಭ್ಯ ವರ್ತನೆ ತೋರಿದ್ದಕ್ಕೆ ಹಿಮಾಚಲ ಪ್ರದೇಶ ವಿಧಾನಸಭೆಯಿಂದ 15 ಮಂದಿ ಶಾಸಕರನ್ನು ಉಚ್ಚಾಟಿಸಲಾಗಿದೆ. ರಾಜ್ಯಸಭಾ ಚುನಾವಣೆಯಲ್ಲಿ 6 ಮಂದಿ ಶಾಸಕರು ಬಿಜೆಪಿಗೆ ಅಡ್ಡ ಮತದಾನ ಮಾಡಿರುವುದರಿಂದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಪ್ರಾರಂಭಗೊಂಡಿರುವ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.
ಬಜೆಟ್ ಅಧಿವೇಶನ ಪ್ರಾರಂಭವಾಗುವುದಕ್ಕೂ ಕೆಲವೇ ನಿಮಿಷಗಳ ಮುನ್ನ ವಿಧಾನಸಭಾ ಸ್ಪೀಕರ್ 15 ಮಂದಿ ಬಿಜೆಪಿ ಶಾಸಕರನ್ನು ಸದನದಿಂದ ಉಚ್ಚಾಟಿಸಿದರು. ಉಚ್ಚಾಟಿತ ಶಾಸಕರು ವಿಧಾನಸಭಾ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯ ಕೊಠಡಿಯಲ್ಲಿ ಘೋಷಣೆಗಳನ್ನು ಕೂಗಿದರು ಎಂದು ಆರೋಪಿಸಲಾಗಿದೆ.
ಉಚ್ಚಾಟಿತ ಬಿಜೆಪಿ ಶಾಸಕರನ್ನು ಜೈರಾಮ್ ಠಾಕೂರ್, ವಿಪಿನ್ ಸಿಂಗ್ ಪಾರ್ಮರ್, ರಣಧೀರ್ ಶರ್ಮ, ಲೋಕೇಂದರ್ ಕುಮಾರ್, ವಿನೋದ್ ಕುಮಾರ್, ಹನ್ಸ್ ರಾಜ್, ಜಾನಕ್ ರಾಜ್, ಬಲ್ಬೀರ್ ವರ್ಮ, ತ್ರಿಲೋಕ್ ಜಮ್ವಾಲ್, ಸುರೇಂದರ್ ಶೋರಿ, ದೀಪ್ ರಾಜ್, ಪೂರಣ್ ಠಾಕೂರ್, ಇಂದರ್ ಸಿಂಗ್ ಗಾಂಧಿ, ದಿಲೀಪ್ ಠಾಕೂರ್ ಹಾಗೂ ಇಂದರ್ ಸಿಂಗ್ ಗಾಂಧಿ ಎಂದು ಗುರುತಿಸಲಾಗಿದೆ.