25 ವರ್ಷಗಳ ಬಳಿಕೆ ದೆಹ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ತಂದುಕೊಟ್ಟ ಹಿಮಾಚಲ ಸಿಎಂ ಪತ್ನಿ

Update: 2024-07-13 16:10 GMT

ಕಮಲೇಶ ಠಾಕೂರ್ |  PC : Facebook

ಶಿಮ್ಲಾ: ಹಿಮಾಚಲ ಪ್ರದೇಶದ ದೆಹ್ರಾ ವಿಧಾನಸಬಾ ಕ್ಷೇತ್ರದ ಉಪಚುನಾವಣೆಯಲ್ಲಿ ತನ್ನ ಪತ್ನಿಯ ಗೆಲುವನ್ನು ಐತಿಹಾಸಿಕವೆಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಬಣ್ಣಿಸಿದ್ದಾರೆ. ಕಳೆದ 25 ವರ್ಷಗಳಿಂದ ಡೆಹ್ರಾ ಕ್ಷೇತ್ರದಲ್ಲಿ ಜಯಗಳಿಸಲು ಸಾಧ್ಯವಾಗಿರಲಿಲ್ಲವೆಂದು ಅವರು ಸಾಮಾಜಿಕ ಜಾಲತಾಣ‘ಎಕ್ಸ್’ನಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ ಠಾಕೂರ್ ಅವರು ಬಿಜೆಪಿಯ ಹೋಶಿಯಾರ್ ಸಿಂಗ್ ಅವರನ್ನು 9339 ಮತಗಳಿಂದ ಪರಾಭವಗೊಳಿಸಿದ್ದರು.

‘‘ಜನತಾ ಶಕ್ತಿಯನ್ನು ಬೆಂಬಲಿಸುವ ಮೂಲಕ ಹಿಮಾಚಲಪ್ರದೇಶದ ಜನರು ಹಣದ ಶಕ್ತಿಯನ್ನು ಸೋಲಿಸಿದ್ದಾರೆ ಹಾಗೂ ಬಿಜೆಪಿಯ ರಾಜಕೀಯ ಸಂಚಿಗೆ ಸೂಕ್ತವಾದ ಉತ್ತರವನ್ನು ನೀಡಿದ್ದಾರೆ. ಇದು ಜನತೆಗೆ ಸಂದ ಗೆಲುವಾಗಿದೆ’’ ಎಂದವರು ಹೇಳಿದ್ದಾರೆ.

ಬಿಜೆಪಿ ಸೇರಲು ಶಾಸಕಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಉಪಚುನಾವಣೆಗೆ ಕಾರಣರಾದ ಮೂವರು ಪಕ್ಷೇತರ ಶಾಸಕರ ವಿರುದ್ಧವೂ ಅವರು ಟೀಕಾ ಪ್ರಹಾರ ನಡೆಸಿದರು.

ಸುಖ್ವಿಂದರ್ ಅವರು ಎಕ್ನ್‌ನಲ್ಲಿ ಪ್ರಟಿಸಿದ ಪ್ರತ್ಯೇಕ ಪೋಸ್ಟ್‌ನಲ್ಲಿ, ದೆಹ್ರಾವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ಮೂಲಕ, ‘ದೆಹ್ರಾ ಅಭಿವೃದ್ಧಿ’ಯ ಕನಸನ್ನು ಸಾಕಾರಗೊಳಿಸಲಾಗುವುದು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News