ಹಿಮಾಚಲ ಪ್ರದೇಶ | ಹಠಾತ್ ಪ್ರವಾಹದಲ್ಲಿ ಮೃತರ ಸಂಖ್ಯೆ 32ಕ್ಕೇರಿಕೆ ; 20ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆ

Update: 2024-08-17 16:19 GMT

PC : PTI 

ಶಿಮ್ಲಾ : ಹಿಮಾಚಲ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಜು.31ರಂದು ಮೇಘ ಸ್ಫೋಟಗಳಿಂದ ಸಂಭವಿಸಿದ ಹಠಾತ್ ಪ್ರವಾಹಗಳಲ್ಲಿ ಮೃತಪಟ್ಟ ಇನ್ನೂ ನಾಲ್ವರ ಶವಗಳು ಪತ್ತೆಯಾಗಿದ್ದು,ಇದರೊಂದಿಗೆ ಸಾವುಗಳ ಸಂಖ್ಯೆ 32ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕುಲು, ಮಂಡಿ ಮತ್ತು ಶಿಮ್ಲಾ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹಗಳ ಬಳಿಕ ಕನಿಷ್ಠ 23 ಜನರು ಇನ್ನೂ ನಾಪತ್ತೆಯಾಗಿದ್ದಾರೆ.

ಶಿಮ್ಲಾ ಉಪವಿಭಾಗದ ರಾಮಪುರದಲ್ಲಿ ಶುಕ್ರವಾರ ಒಂದು ಮೃತದೇಹ ಪತ್ತೆಯಾಗಿದ್ದು, ಹಿಂದಿನ ಆರು ದಿನಗಳಲ್ಲಿ ಮೂರು ಶವಗಳು ಪತ್ತೆಯಾಗಿದ್ದವು. ರಾಮಪುರದಲ್ಲಿ ಪತ್ತೆಯಾದ ಒಟ್ಟು 19 ಶವಗಳ ಪೈಕಿ 11ನ್ನು ಗುರುತಿಸಲಾಗಿದೆ ಎಂದು ಎಸ್‌ಪಿ ಸಂಜೀವಕುಮಾರ ಗಾಂಧಿ ಸುದ್ದಿಸಂಸ್ಥೆಗೆ ತಿಳಿಸಿದರು.

ಮಂಡಿ ಜಿಲ್ಲೆಯಲ್ಲಿ ಒಂಭತ್ತು ಮತ್ತು ಕುಲು ಜಿಲ್ಲೆಯಲ್ಲಿ ನಾಲ್ಕು ಶವಗಳು ಪತ್ತೆಯಾಗಿದ್ದವು.

ಮಂಡಿ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ 10 ಜನರ ಪೈಕಿ ಒಂಭತ್ತು ಜನರ ಮೃತದೇಹಗಳು ಪತ್ತೆಯಾದ ಬಳಿಕ ರಕ್ಷಣಾ ಕಾರ್ಯಾಚರಣೆಯನ್ನು ಅಂತ್ಯಗೊಳಿಸಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News