“ಭಾರತದ ಕುರಿತಂತೆ ಶೀಘ್ರ ದೊಡ್ಡ ವಿಷಯ”: ಕುತೂಹಲ ಮೂಡಿಸಿದ ಹಿಂಡೆನ್‌ಬರ್ಗ್‌ ಪೋಸ್ಟ್

Update: 2024-08-10 06:23 GMT

ಹೊಸದಿಲ್ಲಿ: ಭಾರತದ ಅದಾನಿ ಸಂಸ್ಥೆಯಲ್ಲಿ ವ್ಯಾಪಕ ಅವ್ಯವಹಾರಗಳನ್ನು ಆರೋಪಿಸಿ ಕಳೆದ ವರ್ಷ ವರದಿ ತಂದು ಕೋಲಾಹಲ ಸೃಷ್ಟಿಸಿದ್ದ ಅಮೆರಿಕಾದ ಹಿಂಡೆನ್‌ಬರ್ಗ್‌ ರಿಸರ್ಚ್‌ ಈಗ ಮತ್ತೆ ಸುದ್ದಿಯಲ್ಲಿದೆ.

ಎಕ್ಸ್‌ನಲ್ಲಿ ಶನಿವಾರ ಪೋಸ್ಟ್‌ ಮಾಡಿರುವ ಅಮೆರಿಕಾದ ಈ ಸಂಸ್ಥೆ “ಸಮ್‌ತಿಂಗ್‌ ಬಿಗ್‌ ಸೂನ್‌ ಇಂಡಿಯಾ” ಎಂದು ಬರೆದಿದೆ. ಹಿಂಡೆನ್‌ಬರ್ಗ್‌ ಈ ಬಾರಿ ಭಾರತದ ಯಾವುದಾದರೂ ಪ್ರಮುಖ ಸಂಸ್ಥೆಯ ಕುರಿತಂತೆ ಯಾವುದೋ ಮಹತ್ವದ ವಿಷಯ ಬಹಿರಂಗಗೊಳಿಸಲಿದೆ ಎಂದೇ ತಿಳಿಯಲಾಗಿದ್ದು ಈ ಟ್ವೀಟ್‌ ಈಗ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News