2036ರ ಒಲಿಂಪಿಕ್ಸ್‌ಗೆ ಆತಿಥ್ಯ ಭಾರತದ ಕನಸು : ಮೋದಿ
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು 2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಕನಸನ್ನು ಭಾರತವು ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಕೆಂಪುಕೋಟೆಯಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಅವರು ಜಿ20 ಶೃಂಗಸಭೆಯಂತಹ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲು ಬೇಕಾದ ಮೂಲಸೌಕರ್ಯವನ್ನು ತಾನು ಹೊಂದಿರುವುದನ್ನು ಭಾರತವು ಈಗಾಗಲೇ ಸಾಬೀತುಪಡಿಸಿದೆ. 2036ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವುದು ಅದರ ಮುಂದಿರುವ ಕನಸಾಗಿದೆ. ಈ ನಿಟ್ಟಿನಲ್ಲಿ ಅದು ಈಗಾಗಲೇ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಮೋದಿ ಹೇಳಿದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಕ್ರೀಡಾಪಟುಗನ್ನು ಅಭಿನಂದಿಸಿದ ಅವರು, ಒಲಿಂಪಿಕ್ಸ್‌ನಲ್ಲಿ ಭಾರತೀಯ ಧ್ವಜವು ಎತ್ತರಕ್ಕೆ ಹಾರಿಸಿದ ಯುವಜನರು ಇಂದು ನಮ್ಮೊಂದಿಗಿದ್ದಾರೆ. ನಮ್ಮ ಎಲ್ಲಾ ಅಥ್ಲೀಟ್ ಗಳು ಹಾಗೂ ಆಟಗಾರರನ್ನು ನಾನು ಅಭಿನಂದಿಸುತ್ತೇನೆ ಎಂದರು. ಮುಂದಿನ ಕೆಲವೇ ದಿನಗಳಲ್ಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಪ್ಯಾರಿಸ್‌ಗೆ ತೆರಳಲಿರುವ ಪ್ಯಾರಾಲಿಂಪಿಯನ್ ಗಳಿಗೆ ಅವರು ಶುಭ ಹಾರೈಸಿದರು.