ಆರಂಭಗೊಂಡ ಎರಡೇ ತಿಂಗಳಲ್ಲಿ ಹೈದರಾಬಾದ್-ಅಯೋಧ್ಯೆ ವಿಮಾನ ಸೇವೆ ರದ್ದುಗೊಳಿಸಿದ ಸ್ಪೈಸ್‌ಜೆಟ್
Update: 2024-06-12 10:58 GMT
ಹೊಸದಿಲ್ಲಿ: ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯು ಜೂನ್ 1ರಿಂದ ತನ್ನ ಹೈದರಾಬಾದ್-ಅಯ್ಯೋಧ್ಯೆ ವಿಮಾನ ಸೇವೆಯನ್ನು ರದ್ದುಗೊಳಿಸಿದೆ. ಸ್ಪೈಸ್‌ಜೆಟ್ ಅಯೋಧ್ಯೆಗೆ ಏರ್‌ಬಸ್ ಎ420 ವಿಮಾನ ಒದಗಿಸಿತ್ತು ಆದರೆ ಈ ಸೇವೆ ಆರಂಭಗೊಂಡ ಎರಡೇ ತಿಂಗಳಲ್ಲಿ ರದ್ದುಗೊಂಡಿದೆ.
ಸ್ಪೈಸ್‌ಜೆಟ್ ಅಯ್ಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏಳು ನಗರಗಳಿಂದ ಸಂಪರ್ಕವನ್ನು ಫೆಬ್ರವರಿಯಲ್ಲಿ ಆರಂಭಿಸಿದ್ದರೆ, ಚೆನ್ನೈ, ಬೆಂಗಳೂರು. ಜೈಪುರ್, ಪಾಟ್ನಾ, ದರ್ಭಾಂಗ ಮತ್ತು ಹೈದರಾಬಾದ್‌ನಿಂದ ಅಯೋಧ್ಯೆಗೆ ನೇರ ವಿಮಾನ ಸಂಪರ್ಕವನ್ನು ಸ್ಪೈಸ್‌ಜೆಟ್ ರದ್ದುಗೊಳಿಸಿದ್ದು ಪ್ರಸ್ತುತ ಅಹ್ಮದಾಬಾದ್ ಮತ್ತು ದಿಲ್ಲಿಯಿಂದ ಮಾತ್ರ ಅಯೋಧ್ಯೆಗೆ ನೇರ ವಿಮಾನ ಸಂಪರ್ಕವನ್ನು ಸ್ಪೈಸ್‌ಜೆಟ್ ಒದಗಿಸುತ್ತಿದೆ.