ಶಾಂತಿಯ ಬಗ್ಗೆ ಗಂಭೀರತೆ ಇಲ್ಲದಿದ್ದರೆ ಇತರ ರಾಜ್ಯಗಳಿಗೆ ಹೋಗಿ: ಮಣಿಪುರದ ಕುಕಿ ಶಾಸಕರಿಗೆ ಬಿಜೆಪಿ ಶಾಸಕನ ಸೂಚನೆ
ಗುವಾಹಟಿ: ಶಾಂತಿಗಾಗಿ ಶ್ರಮಿಸುವ ಬಗ್ಗೆ ಗಂಭೀರತೆ ಇಲ್ಲದಿದ್ದರೆ ಮತ್ತು ಪ್ರತ್ಯೇಕ ಆಡಳಿತದ ಬೇಡಿಕೆಯೇ ಮುಖ್ಯವಾಗಿದ್ದರೆ ರಾಜ್ಯವನ್ನು ತೊರೆದು ಬೇರೆ ರಾಜ್ಯಗಳಿಂದ ಚುನಾವಣೆಗಳಲ್ಲಿ ಸ್ಪರ್ಧಿಸುವಂತೆ ಕುಕಿ ಶಾಸಕರಿಗೆ ಮಣಿಪುರದ ಆಡಳಿತಾರೂಢ ಬಿಜೆಪಿಯ ಶಾಸಕ ರಾಜಕುಮಾರ ಇಮೋ ಸಿಂಗ್ ಅವರು ಸೂಚಿಸಿದ್ದಾರೆ. ಈ ಶಾಸಕರ ಪೈಕಿ ಏಳು ಜನರು ಬಿಜೆಪಿಗೆ ಸೇರಿದವರೇ ಆಗಿದ್ದಾರೆ.
‘ಈ ಚುನಾಯಿತ ಪ್ರತಿನಿಧಿಗಳು ವಿಭಿನ್ನ ಅಜೆಂಡಾ ಹೊಂದಿರುವ ಮಿರೆರಮ್ ಮುಖ್ಯಮಂತ್ರಿ ರೆರಾಮ್ತಂಗಾ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಮಣಿಪುರದಲ್ಲಿಯ ಹಾಲಿ ಪ್ರಕ್ಷುಬ್ಧತೆಗೆ ಪರಿಹಾರವನ್ನು ಕಂಡುಕೊಳ್ಳಲು ಹೇಗೆ ಸಾಧ್ಯ? ನಮ್ಮ ರಾಜ್ಯದಲ್ಲಿ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ಅವರು ಗಂಭೀರವಾಗಿದ್ದಾರೆಯೇ ’ಎಂದು ಸಿಂಗ್ ನಲ್ಲಿ ಪ್ರಶ್ನಿಸಿದ್ದಾರೆ.
ಕುಕಿ-ರೆ ಶಾಸಕರು ಬುಧವಾರ ಐಜ್ವಾಲ್ನಲ್ಲಿ ಮಿರೆರಮ್ ಮುಖ್ಯಮಂತ್ರಿ ಜೊತೆಗೆ ರಹಸ್ಯ ಸಭೆಯನ್ನು ನಡೆಸಿದ್ದರು. ಕೆಲವು ಕುಕಿ-ರೆ ಸಾಮಾಜಿಕ ಸಂಘಟನೆಗಳ ನಾಯಕರೂ ಸಭೆಯಲ್ಲಿ ಭಾಗವಹಿಸಿದ್ದರು.
ಈ ಶಾಸಕರು ತಮ್ಮ ಬೇಡಿಕೆಯ ಈಡೇರಿಕೆಗಾಗಿ ಪಟ್ಟು ಹಿಡಿಯುವುದನ್ನು ಮುಂದುವರಿಸಿದರೆ ಮತ್ತು ಶಾಂತಿ ಸ್ಥಾಪನೆಯ ಬಗ್ಗೆ ಗಂಭೀರವಾಗಿಲ್ಲದಿದ್ದರೆ ಮಣಿಪುರ ವಿಧಾನಸಭೆಗೆ ರಾಜೀನಾಮೆ ಸಲ್ಲಿಸುವಂತೆ ತಾನು ಅವರನ್ನು ಆಗ್ರಹಿಸುವುದಾಗಿ ಸಿಂಗ್ ಹೇಳಿದರು.