ಅಕ್ರಮ ಗಣಿಗಾರಿಕೆ, ಅನಿಯಂತ್ರಿತ ನಿರ್ಮಾಣ ಚಟುವಟಿಕೆ ವಯನಾಡ್‌ ಭೂಕುಸಿತಕ್ಕೆ ಕಾರಣ: ಕೇಂದ್ರ ಸಚಿವ ಭೂಪೇಂದರ್‌ ಯಾದವ್‌

Update: 2024-08-06 09:59 GMT

Photo: PTI

ಹೊಸದಿಲ್ಲಿ: ಅಕ್ರಮ ಗಣಿಗಾರಿಕೆ, ಅನಿಯಂತ್ರಿತ ನಿರ್ಮಾಣ ಮತ್ತು ವಾಣಿಜ್ಯ ಚಟುವಟಿಕೆಗಳೂ ಸೇರಿದಂತೆ ಭಾರೀ ಮಳೆಯು ವಯನಾಡ್‌ ಭೂಕುಸಿತಗಳಿಗೆ ಕಾರಣವಾಯಿತು ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್‌ ಯಾದವ್‌ ಹೇಳಿದ್ದಾರೆ.

ಕೇರಳದ “ಸ್ಥಳೀಯ ರಾಜಕಾರಣಿಗಳು” ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಜನವಸತಿಗೆ ಅನುಮತಿಸಿ ಹಾಗೂ ಒತ್ತುವರಿಗೆ ಅವಕಾಶ ನೀಡಿದ್ದಾರೆ ಎಂದು ಕೇಂದ್ರ ಸಚಿವರು ಆರೋಪಿಸಿದ್ದಾರೆ.

ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವ ಜವಾಬ್ದಾರಿ ವಹಿಸಲಾಗಿರುವ ಅರಣ್ಯ ಇಲಾಖೆಯ ಮಾಜಿ ಮಹಾನಿರ್ದೇಶಕ ಸಂಜಯ್‌ ಕುಮಾರ್‌ ಅವರ ನೇತೃತ್ವದ ಸಮಿತಿಯಿಂದ ದೂರವಿರಲು ಕೇರಳದ ಎಡರಂಗ ಸರ್ಕಾರ ಯತ್ನಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.

ಬಿಕ್ಕಟ್ಟಿನ ಸಮಯದಲ್ಲಿ ಒಗ್ಗಟ್ಟಿನ ಅಗತ್ಯ ಇರುವಂತಹ ಸಂದರ್ಭದಲ್ಲಿ ಕೇಂದ್ರ ಸಚಿವರ ಹೇಳಿಕೆಗಳ ದುರಾದೃಷ್ಟಕರ ಎಂದು ಕೇರಳ ಅರಣ್ಯ ಸಚಿವ ಎ ಕೆ ಶಶೀಂದ್ರನ್‌ ಹೇಳಿದ್ದಾರೆ. ವಯನಾಡ್‌ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂಬ ಕೇರಳ ಸರ್ಕಾರದ ಕೋರಿಕೆಯನ್ನು ನಿರಾಕರಿಸಲು ಕೇಂದ್ರ ಸಚಿವರು ಕಾನೂನಾತ್ಮಕ ಮತ್ತು ರಾಜಕೀಯ ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎಂದು ಶಶೀಂದ್ರನ್‌ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News