ಅಂತರರಾಷ್ಟ್ರೀಯ ಹೂಡಿಕೆಗಳಿಗೆ ಪೂರಕವಾದ ನೀತಿಗಳನ್ನು ಭಾರತ ರಚಿಸಬೇಕು: ನೀತಿ ಆಯೋಗ ಸಭೆಯಲ್ಲಿ ಪ್ರಧಾನಿ ಮೋದಿ

Update: 2024-07-27 12:08 GMT
Photo: PTI

ಹೊಸದಿಲ್ಲಿ: ಅಂತರರಾಷ್ಟ್ರೀಯ ಹೂಡಿಕೆಗಳಿಗೆ ಪೂರಕವಾದ ನೀತಿಗಳನ್ನು ಭಾರತ ರಚಿಸಬೇಕಿದೆ ಎಂದು ಇಂದು ನಡೆದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

“ಈ ದಶಕವು ಬದಲಾವಣೆಗಳ, ತಂತ್ರಜ್ಞಾನದ ಮತ್ತು ಅವಕಾಶಗಳ ದಶಕವಾಗಿದೆ. ಭಾರತ ಈ ಅವಕಾಶಗಳನ್ನು ಸೆಳೆದುಕೊಳ್ಳಬೇಕು ಮತ್ತು ತನ್ನ ನೀತಿಗಳನ್ನು ಅಂತರರಾಷ್ಟ್ರೀಯ ಹೂಡಿಕೆಗಳಿಗೆ ಪೂರಕಗೊಳಿಸಬೇಕು. ಇದು ಭಾರತವನ್ನು ಪ್ರಗತಿಯತ್ತ ಸಾಗಿಸಲು ಇಡಬೇಕಾದ ಹೆಜ್ಜೆಯಾಗಿದೆ,” ಎಂದು ಪ್ರಧಾನಿ ಹೇಳಿದ್ದಾರೆಂದು ನೀತಿ ಆಯೋಗ ತನ್ನ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ಭಾರತವನ್ನು 2047 ವೇಳೆಗೆ 30 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿಸುವ ವಿಕಸಿತ್‌ ಭಾರತ್‌ @2047, ಎಂಬ ದೃಷ್ಟಿಕೋನದ ವಿಷನ್‌ ಡಾಕ್ಯುಮೆಂಟ್‌ ಕುರಿತ ಚರ್ಚೆಗಳ ನೇತೃತ್ವವನ್ನು ಪ್ರಧಾನಿ ವಹಿಸಿದರು.

ರಾಷ್ಟ್ರಪತಿ ಭವನ್‌ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗವರ್ನರ್‌ಗಳು, ಕೇಂದ್ರ ಸಚಿವರು ಮತ್ತು ನೀತಿ ಆಯೋಗದ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News