ದೊಡ್ಡ ಉದ್ಯಮಗಳ ಏಕಾಧಿಪತ್ಯವನ್ನು ಬಲಪಡಿಸುವುದು ಬಜೆಟ್‌ನ ಏಕೈಕ ಉದ್ದೇಶ: ಸಂಸತ್ತಿನಲ್ಲಿ ರಾಹುಲ್‌ ಗಾಂಧಿ ವಾಗ್ದಾಳಿ

Update: 2024-07-29 09:56 GMT

ವಿಪಕ್ಷ ನಾಯಕ ರಾಹುಲ್‌ ಗಾಂಧಿ (Photo:X/ANI)

ಹೊಸದಿಲ್ಲಿ: ಸಂಸತ್ತಿನ ಬಜೆಟ್‌ ಅಧಿವೇಶನದ ಎರಡನೇ ವಾರ ಇಂದು ಆರಂಭಗೊಂಡಿದ್ದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಬಜೆಟ್‌ 2024 ಕುರಿತು ಮಾತನಾಡಿ, ದೊಡ್ಡ ಉದ್ಯಮಗಳ ಏಕಾಧಿಪತ್ಯವನ್ನು ಬಲಪಡಿಸುವ ಏಕೈಕ ಉದ್ದೇಶ ಬಜೆಟ್‌ಗಿರುವಂತೆ ತೋರುತ್ತಿದೆ ಎಂದಿದ್ದಾರೆ.

ಭಾರತವನ್ನು ವಶಪಡಿಸಿಕೊಂಡಿರುವ ಚಕ್ರವ್ಯೂಹದ ಹಿಂದೆ ಮೂರು ಶಕ್ತಿಗಳಿವೆ. ಏಕಾಧಿಪತ್ಯದ ಬಂಡವಾಳ – ಅಂದರೆ ಇಡೀ ದೇಶದ ಸಂಪತ್ತಿನ ಒಡೆತನಕ್ಕೆ 2 ಜನರಿಗೆ ಮಾತ್ರ ಅನುಮತಿಸುವುದು. ಹಾಗಿರುವಾಗ ಆರ್ಥಿಕ ಶಕ್ತಿಯ ಒಂದೇ ಕಡೆಯ ಕ್ರೋಢೀಕರಣ ಚಕ್ರವ್ಯೂಹದ ಒಂದು ಅಂಶ, ಎರಡನೆಯದು ದೇಶದ ಸಿಬಿಐ, ಈಡಿ ಮತ್ತು ಐಟಿ ಸಂಸ್ಥೆಗಳು ಮೂರನೆಯದು ರಾಜಕೀಯ ಕಾರ್ಯಾಂಗ. ಈ ಮೂರು ಜೊತೆಯಾಗಿ ಚಕ್ರವ್ಯೂಹದ ಹೃದಯವಾಗಿದ್ದು ಅವು ದೇಶವನ್ನು ತತ್ತರಿಸುವಂತೆ ಮಾಡಿವೆ,ʼ ಎಂದು ರಾಹುಲ್‌ ಹೇಳಿದರು.

“ಪ್ರಧಾನಿ ಮೋದಿ ಎ1 ಮತ್ತು ಎ2 ಅವರನ್ನು ರಕ್ಷಿಸಲು ಬಯಸುತ್ತಾರೆ ಎಂದು ನಮಗೆ ಅರ್ಥವಾಗುತ್ತದೆ,” ಎಂದು ಪರೋಕ್ಷವಾಗಿ ಉದ್ಯಮಿಗಳಾದ ಗೌತಮ್‌ ಅದಾನಿ ಮತ್ತು ಮುಕೇಶ್‌ ಅಂಬಾನಿ ಅವರನ್ನು ಉಲ್ಲೇಖಿಸಿದರು. ಉದ್ಯಮಿಗಳ ಹೆಸರು ಉಲ್ಲೇಖಿಸುವುದರಿಂದ ಸ್ಪೀಕರ್‌ ಓಂ ಬಿರ್ಲಾ ತಡೆದ ನಂತರ ರಾಹುಲ್‌ ಮೇಲಿನಂತೆ ಹೇಳಿದರು.

“ದೇಶದ ಯುವಜನತೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಗಳು ಕಾಡಿವೆ, ಆದರೆ ಅದನ್ನು ವಿತ್ತ ಸಚಿವೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿಲ್ಲ.” ಎಂದು ಅವರು ಹೇಳಿದರು.

ಸಣ್ಣ ಉದ್ಯಮಗಳನ್ನು ತೀವ್ರವಾಗಿ ಬಾಧಿಸಿರುವ ತೆರಿಗೆ ಉಗ್ರವಾದದ ಸಮಸ್ಯೆಗೆ ಬಜೆಟ್‌ ಪರಿಹಾರ ಸೂಚಿಸಿಲ್ಲ, ದೇಶದಲ್ಲಿ ಭಯದ ವಾತಾವರಣವಿದೆ,” ಎಂದು ರಾಹುಲ್‌ ಹೆಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News