ಇಂಡಿಯಾ ಮೈತ್ರಿಕೂಟ ತೊರೆಯಲಿದ್ದಾರೆಯೇ ಬಿಹಾರ ಸಿಎಂ ನಿತೀಶ್ ಕುಮಾರ್?

Update: 2024-01-25 14:04 GMT

ನಿತೀಶ್ ಕುಮಾರ್ | Photo: NDTV 

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟ ದಿಂದ ಹೊರನಡೆಯುವ ಸಾಧ್ಯತೆಯಿರುವುದರಿಂದ, ಲೋಕಸಭಾ ಚುನಾವಣೆಗಾಗಿ ಹುಟ್ಟಿಹಾಕಿದ್ದ ನೂತನ ಮೈತ್ರಿಕೂಟ ದಲ್ಲಿ ಒಡಕು ಮೂಡುವ ಲಕ್ಷಣ ಕಂಡುಬರುತ್ತಿದೆ. ನಿತೀಶ್ ಕುಮಾರ್ ಕೊನೆಯ ಕ್ಷಣದ ಯು-ಟರ್ನ್ ತೆಗೆದುಕೊಂಡು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪಾಲುದಾರರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಎರಡು ದಿನಗಳಿಂದ ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ - ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ತಳ್ಳಿಹಾಕಿದ್ದಾರೆ. ಬಂಗಾಳ ಮತ್ತು ಪಂಜಾಬ್ನಲ್ಲಿ ಏಕಾಂಗಿಯಾಗಿ ಜನರ ಬಳಿಗೆ ಹೋಗುವುದಾಗಿ ಹೇಳಿದ್ದಾರೆ.

ನಿತೀಶ್ ಕುಮಾರ್ ಅವರು ತಮ್ಮ ಎಲ್ಲಾ ಶಾಸಕರಿಗೆ ಪಾಟ್ನಾಗೆ ಬುಲಾವ್ ನೀಡಿದ್ದಾರೆ. ಅವರು ಮೊದಲು ರಾಜೀನಾಮೆ ನೀಡಿ ನಂತರ ಬಿಜೆಪಿಯ ಜಿತನ್ ರಾಮ್ ಮಾಂಝಿ ಮತ್ತು ಇತರರ ಸಹಾಯದಿಂದ ಹಕ್ಕು ಚಲಾಯಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಹೊಸ ಕ್ಯಾಬಿನೆಟ್ ರಚನೆಯಾದ ನಂತರ, ಅವರು ಈಗಿನ ಸದನವನ್ನು ವಿಸರ್ಜಿಸಲು ಶಿಫಾರಸು ಮಾಡಿ ಹೊಸ ಜನಾದೇಶವನ್ನು ಕೋರುವ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗಿದೆ.

ನಿತೀಶ್ ಕುಮಾರ್ ಅವರಿಗೆ ಇದು ಮೈತ್ರಿಕೂಟ ಗಳ ನಡುವಿನ ಐದನೇ ಬದಲಾವಣೆ. ರಾಜ್ಯದಲ್ಲಿ ಅಧಿಕಾರದಲ್ಲಿಟ್ಟುಕೊಂಡೇ 2013 ರಿಂದ, ಅವರು ಎನ್ಡಿಎ ಮತ್ತು ಮಹಾಘಟಬಂಧನ್ ನಡುವೆ ಅತಿಥಿಯ ಪಾತ್ರ ನಿರ್ವಹಿಸುತ್ತಿದ್ದಾರೆ. 2022 ರಲ್ಲಿ ಅವರು ಎನ್ ಡಿ ಎ ಮೈತ್ರಿಕೂಟದಿಂದ ಹೊರಬಂದರು.

ಕಳೆದ ವಾರಗಳಲ್ಲಿ ವಂಶವಾಹಿ ಆಡಳಿತದ ಬಗ್ಗೆ ನಿತೀಶ್ ಕುಮಾರ್ ತೀಕ್ಷ್ಣವಾದ ಕಮೆಂಟ್ಗಳನ್ನು ಮಾಡುವುದು, ಬಳಿಕ ಅಳಿಸಿ ಹಾಕುವ ಕೆಲಸವನ್ನೇ ಹೆಚ್ಚು ಮಾಡುತ್ತಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಲಾಲು ಯಾದವ್ ಅವರ ಪುತ್ರಿಯಿಂದ ಬಂದ ಪ್ರತ್ಯುತ್ತರಗಳು ಇಂಡಿಯಾ ಮೈತ್ರಿಕೂಟದೊಳಗೆ ಬಿರುಕು ಕಾಣಿಸಿಕೊಂಡಿರುವ ಸೂಚನೆ ಹೊರಹಾಕಿದೆ.

ನಿನ್ನೆ, ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ನೀಡಿದ್ದ ಆಹ್ವಾನಕ್ಕೆ ನಿತೀಶ್ ಕುಮಾರ್ ನೀಡಲಿಲ್ಲ. ಅವರ ಪ್ರತಿಕ್ರಿಯೆಯ ಕೊರತೆಯು ಅವರ ಹೊಸ ಮೈತ್ರಿಯ ಮೇಲೆ ಪ್ರಶ್ನೆ ಹುಟ್ಟಿಹಾಕಿದೆ. ವಿರೋಧ ಪಕ್ಷದ ಏಕತೆಯ ಬಗ್ಗೆ ಊಹಾಪೋಹ ಹರಿದಾಡುತ್ತಿದೆ.

ಇಂಡಿಯಾ ಮೈತ್ರಿಕೂಟದ ಚುನಾವಣಾ ತಯಾರಿಯಲ್ಲಿ ಸ್ಪಷ್ಟತೆಯ ಕೊರತೆ ಮತ್ತು ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿ ಅಂಗೀಕರಿಸಲ್ಪಟ್ಟಿರುವ ಕುರಿತು ನಿತೀಶ್ ಕುಮಾರ್ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಮಾತುಕತೆ ವಿಳಂಬವಾಗುತ್ತಿರುವುದರಿಂದ ವಿರೋಧ ಪಕ್ಷಗಳ ಒಗ್ಗಟ್ಟು ಮತ್ತಷ್ಟು ಬಿಗಡಾಯಿಸಿದೆ.

ನಿತೀಶ್ ಕುಮಾರ್ ಅವರು ಲಲ್ಲನ್ ಸಿಂಗ್ ಅವರನ್ನು ವಜಾಗೊಳಿಸಿ ಜೆಡಿಯು ಮುಖ್ಯಸ್ಥರಾಗಿ ಮರಳುವುದರೊಂದಿಗೆ ಇಂಡಿಯಾ ಮೈತ್ರಿಕೂಟದಿಂದ ಹೊರ ನಡೆಯುವ ಅವರ ಕೆಲಸ ಪ್ರಾರಂಭವಾಯಿತು ಎನ್ನಲಾಗಿದೆ. ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಧಾನಿ ಹುದ್ದೆಗೆ ಪ್ರಸ್ತಾಪಿಸಿದಾಗ ನಿತೀಶ್ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ಮುಂಚಿತವಾಗಿಯೇ ʼತಯಾರಿʼ ಮಾಡಿರುವಂತೆ ತೋರುತ್ತಿದೆ ಎನ್ನಲಾಗಿದೆ.

ನಿತೀಶ್ ಕುಮಾರ್ ವಾಪಸಾತಿ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಸಂದೇಹ ವ್ಯಕ್ತಪಡಿಸುತ್ತಿದ್ದರೂ ಪಕ್ಷದ ಉನ್ನತ ನಾಯಕತ್ವದ ಯೋಜನೆಗೆ ರಾಜ್ಯ ಘಟಕ ಸಮ್ಮತಿ ಸೂಚಿಸಿಲ್ಲ ಎಂದು ತಿಳಿಸಿವೆ. ರಾಜ್ಯ ಬಿಜೆಪಿ ಮುಖ್ಯಸ್ಥರನ್ನು ದೆಹಲಿಗೆ ಕರೆಸಿ, ನಿತೀಶ್ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಂದು ರಾಜ್ಯ ನಾಯಕರಿಗೆ ಖಡಾಖಂಡಿತವಾಗಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಎಲ್ಲಾ ಬೆಳವಣಿಗೆಗಳ ಅರಿವಿಲ್ಲದ ಇಂಡಿಯಾ ಮೈತ್ರಿಕೂಟದ ವಿರುದ್ಧ ಸಿಟ್ಟಿಗೆದ್ದಿರುವ ನಿತೀಶ್ ಕುಮಾರ್ ಅವರನ್ನು ಸಮಾಧಾನಪಡಿಸಲು ಯತ್ನಿಸುತ್ತಿದೆ. ಲಾಲು ಪ್ರಸಾದ್ ಯಾದವ್ ಅವರು ಈಗಾಗಲೇ ನಿತೀಶ್ ಕುಮಾರ್ ಅವರಿಗೆ ಕರೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಟ್ನಾದಲ್ಲಿ ರಾಷ್ಟ್ರೀಯ ಜನತಾ ದಳ ತನ್ನ ನಾಯಕರ ಸಭೆಯನ್ನು ಕರೆದಿದೆ. ಕಾಂಗ್ರೆಸ್ ಕೂಡ ಬಿಹಾರಕ್ಕೆ ಪ್ರವೇಶಿಸಿದಾಗ ಭಾರತ್ ಜೋಡೋ ನ್ಯಾಯ ಯಾತ್ರೆಗೆ ನಿತೀಶ್ ಕುಮಾರ್ ಅವರನ್ನು ಸೇರುವಂತೆ ಮಾಡಲು ಪ್ರಯತ್ನಗಳು ನಡೆದಿದೆ ಎನ್ನಲಾಗಿದೆ.

ತನ್ನ ಚುನಾವಣಾ ಯೋಜನೆಯನ್ನು ಹೆಚ್ಚಿಸಲು, ಸೀಟು ಹಂಚಿಕೆಯನ್ನು ಅಂತಿಮಗೊಳಿಸಲು ಮತ್ತು ತನ್ನ ಪ್ರಚಾರವನ್ನು ಮುಂದುವರಿಸಲು ಹೆಣಗಾಡುತ್ತಿರುವ ಇಂಡಿಯಾ ಮೈತ್ರಿಕೂಟಕ್ಕೆ ಇದು ದೊಡ್ಡ ಹೊಡೆತವಾಗಿದೆ.

ನಿತೀಶ್ ಕುಮಾರ್ ಅವರು ಪ್ರತಿಪಕ್ಷಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಸಂವಾದಕರಾಗಿದ್ದರು. ಪ್ರಾರಂಭದಲ್ಲಿ ತಮ್ಮ ಪ್ರಯತ್ನಕ್ಕೆ ಅವರು ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿಯಂತಹ ಭಿನ್ನಾಭಿಪ್ರಾಯಗಳನ್ನು ಎದುರಿಸಿದರು. ಈಗ ಆ ಎರಡೂ ಪಕ್ಷಗಳು ಇಂಡಿಯಾ ಮೈತ್ರಿಕೂಟದಿಂದ ಹೊರಹೋಗಿದೆ.

ಆಧಾರ : NDTV 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News