ಜಮ್ಮು ಕಾಶ್ಮೀರ | ಲೆಫ್ಟಿನೆಂಟ್ ಗವರ್ನರ್‌ಗೆ 5 ಶಾಸಕರ ನಾಮನಿರ್ದೇಶನದ ಅಧಿಕಾರ ಪ್ರಶ್ನಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

Update: 2024-10-15 15:31 GMT

ಸುಪ್ರೀಂಕೋರ್ಟ್ | PC : PTI 

ಹೊಸದಿಲ್ಲಿ : ವಿಧಾನಸಭೆಗೆ ಐವರು ಸದಸ್ಯರನ್ನು ನಾಮಕರಣಗೊಳಿಸಲು ಜಮ್ಮುಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಇರುವ ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ. ಆದರೆ ಅರ್ಜಿದಾರರು ಈ ವಿಚಾರವಾಗಿ ಹೈಕೋರ್ಟ್‌ನ ಮೆಟ್ಟಲೇರುವುದಕ್ಕೆ ಅದು ಅನುಮತಿ ನೀಡಿದೆ.

ಆದರೆ ಈ ಅರ್ಜಿಯ ಕ್ಷಿುಣಾತ್ಮಕತೆಯ ಕುರಿತಾಗಿ ತಾನು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲವೆಂದು ನ್ಯಾಯಾಧೀಶರಾದ ಸಂಜೀವ್ ಖನ್ನಾ ಹಾಗೂ ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.

ಜಮ್ಮುಕಾಶ್ಮೀರ ವಿಧಾನಸಭೆಯು 90 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. 2019ರ ಜಮ್ಮುಕಾಶ್ಮೀರ ಪುನರ್‌ವಿಂಗಡಣಾ ಕಾಯ್ದೆಯ ಸೆಕ್ಷನ್ 15ಕ್ಕೆ ಮಾಡಲಾದ ತಿದ್ದುಪಡಿಯ ಪ್ರಕಾರ ಐವರು ಶಾಸಕರನ್ನು ನಾಮಕರಣಗೊಳಿಸುವ ಅಧಿಕಾರವನ್ನು ರಾಜ್ಯಪಾಲರು ಹೊಂದಿದ್ದಾರೆ. ನಾಮಕರಣಗೊಳ್ಳುವ ಐವರು ಶಾಸಕರ ಪೈಕಿ ಮೂವರು ಮಹಿಳೆಯರು ಇರಬೇಕಾಗುತ್ತದೆ.

ಹೀಗೆ 95 ಸದಸ್ಯ ಬಲದ ಜಮ್ಮುಕಾಶ್ಮೀರ ವಿಧಾನಸಭೆಯಲ್ಲಿ ಬಹುಮತ ಪಡೆಯಲು ಆಡಳಿತರೂಢ ಪಕ್ಷ ಅಥವಾ ಮೈತ್ರಿಕೂಟವು 95 ಸ್ಥಾನಗಳನ್ನು ಹೊಂದಿರಬೇಕಾಗುತ್ತದೆ.

ಅರ್ಜಿದಾರ ರವೀಂದರ್ ಕುಮಾರ್ ಶರ್ಮಾ ಅವರ ವಕೀಲ ಅಭಿಷೇಕ್ ಸಿಂಘ್ವಿ ಅವರು ಸೋಮವಾರ ನಡೆದ ವಿಚಾರಣೆಯ ವೇಳೆ ವಾದ ಮಂಡಿಸುತ್ತಾ, ಶಾಸಕರ ನಾಮನಿರ್ದೇಶನವು ಜನಾದೇಶವನ್ನು ಕಡೆಗಣಿಸಿದಂತಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಐದು ಮಂದಿ ಸದಸ್ಯರನ್ನು ನಾಮಕರಣಗೊಳಿಸಿದಲ್ಲಿ ಜಮ್ಮುಕಾಶ್ಮೀರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಒಟ್ಟಾರೆ 47 ಸದಸ್ಯರನ್ನು ಹೊಂದಲಿವೆ. ಹೀಗಾಗಿ ಆಡಳಿತ ಮೈತ್ರಿಕೂಟವು 48 ಸದಸ್ಯರನ್ನು ಅಂದರೆ ಒಂದು ಸ್ಥಾನವನ್ನು ಮಾತ್ರವೇ ಹೆಚ್ಚುವರಿಯಾಗಿ ಪಡೆದಂತಾಗುವುದು. ಒಂದು ವೇಳೆ ಒಬ್ಬ ವ್ಯಕ್ತಿಯು ಪ್ರತಿಪಕ್ಷಗಳ ಮೈತ್ರಿಕೂಟವನ್ನು ಸೇರಿದಲ್ಲಿ, ಜನಾದೇಶವೇ ಅನೂರ್ಜಿತಗೊಂಡಂತಾಗುತ್ತದೆ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News