ಬಾಬಾ ಸಿದ್ದೀಕಿ ಹತ್ಯೆ ಆರೋಪಿಯ ಫೋನ್ ನಲ್ಲಿ ಪುತ್ರ ಜೀಶನ್ ಪೋಟೋ!

Update: 2024-10-19 05:01 GMT

Photo : facebook/Jeeshan Siddique

ಮಹಾರಾಷ್ಟ್ರ : ಎನ್ ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದ ತನಿಖೆ ವೇಳೆ ಪೊಲೀಸರಿಗೆ ಮಹತ್ವದ ಅಂಶ ಪತ್ತೆಯಾಗಿದ್ದು, ಆರೋಪಿಗಳಲ್ಲಿ ಓರ್ವನ ಮೊಬೈಲ್ ಫೋನ್ ನಲ್ಲಿ ಜೀಶನ್ ಸಿದ್ದೀಕಿ ಅವರ ಪೋಟೋ ಇತ್ತು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.

ಮಾಜಿ ಸಚಿವ, ಎನ್ಸಿಪಿ ನಾಯಕ ಬಾಬಾ ಸಿದ್ದೀಕಿಗೆ ಕಳೆದ ಶನಿವಾರ ಮುಂಬೈನಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಬಂಧಿತ ಆರೋಪಿಗಳಲ್ಲಿ ಓರ್ವನಿಂದ ವಶಪಡಿಸಿಕೊಂಡ ಫೋನ್ ನಲ್ಲಿ ಜೀಶನ್ ಸಿದ್ದೀಕಿ ಅವರ ಫೋಟೋ ಪತ್ತೆಯಾಗಿದೆ. ಈ ಪೋಟೋವನ್ನು ಸ್ನ್ಯಾಪ್ ಚಾಟ್ ಮೂಲಕ ಹಂಚಿಕೊಳ್ಳಲಾಗಿದ್ದು, ಶೂಟರ್ಗಳು ಮತ್ತು ಸಂಚುಕೋರರು ಪರಸ್ಪರ ಸಂಪರ್ಕಕ್ಕೆ ಈ ವೇದಿಕೆಯನ್ನು ಬಳಸುತ್ತಿದ್ದರು ಎನ್ನುವುದು ತನಿಖೆಯ ವೇಳೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅ.12ರಂದು ಮುಂಬೈನ ಬಾಂದ್ರಾ ಪ್ರದೇಶದ ನಿರ್ಮಲ್ ನಗರದಲ್ಲಿನ ಶಾಸಕ ಜೀಶನ್ ಸಿದ್ದೀಕಿ ಕಚೇರಿ ಬಳಿ ಬಾಬಾ ಸಿದ್ದೀಕಿ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಘಟನೆ ಬಳಿಕ ಅವರನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ಈ ಪ್ರಕರಣದಲ್ಲಿ ಇದುವರೆಗೆ ಇಬ್ಬರು ಶೂಟರ್ ಗಳು ಸೇರಿದಂತೆ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಿತಿನ್ ಗೌತಮ್ ಸಪ್ರೆ (32), ಸಂಭಾಜಿ ಕಿಸಾನ್ ಪಾರ್ಧಿ (44), ಪ್ರದೀಪ್ ದತ್ತು ಥಾಂಬ್ರೆ (37), ಚೇತನ್ ದಿಲೀಪ್ ಪಾರ್ಧಿ ಮತ್ತು ರಾಮ್ ಫುಲ್ಚಂದ್ ಕನೂಜಿಯಾ (43) ಅವರನ್ನು ಶೂಟರ್ ಗಳಿಗೆ ಬಂದೂಕುಗಳು ಸೇರಿದಂತೆ ಇತರ ಸಹಕಾರ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಸಿದ್ದೀಕಿ ಅವರನ್ನು ಹತ್ಯೆ ಮಾಡುವಂತೆ ನನಗೆ ಮತ್ತು ಗೌತಮ್ ಸಪ್ರೆಗೆ ಮೊದಲು ತಿಳಿಸಲಾಗಿತ್ತು. ಹತ್ಯೆ ಮಾಡಿದರೆ 1 ಕೋಟಿ ರೂ. ನೀಡವುದಾಗಿಯೂ ಹೇಳಲಾಗಿತ್ತು. ಆದರೆ ನಾವು ಹತ್ಯೆಯಿಂದ ಹಿಂದೆ ಸರಿದಿದ್ದೇವೆ ಎಂದು ಆರೋಪಿಗಳಲ್ಲಿ ಓರ್ವನಾದ ಕನೂಜಿಯಾ ತನಿಖೆಯ ವೇಳೆ ಹೇಳಿದ್ದಾನೆ. ಕನೌಜಿಯಾ ಮತ್ತು ಸಪ್ರೆ ಹಿಂದೆ ಸರಿದ ನಂತರ, ಧರ್ಮರಾಜ್ ಕಶ್ಯಪ್, ಗುರ್ನೈಲ್ ಸಿಂಗ್ ಮತ್ತು ಶಿವಕುಮಾರ್ ಗೌತಮ್ ಅವರಿಗೆ ಈ ಟಾಸ್ಕ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News