ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಸ್ಫೋಟ | ಜಿರ್ಬಾಮ್ ಜಿಲ್ಲೆಯಲ್ಲಿ ಬಂಡುಕೋರರಿಂದ ದಾಳಿ

Update: 2024-10-19 07:46 GMT

Photo : PTI

ಇಂಫಾಲ : ಜಿರ್ಬಾಮ್ ಜಿಲ್ಲೆಯ ಗ್ರಾಮವೊಂದರ ಮೇಲೆ ಬಂಡುಕೋರರು ದಾಳಿ ನಡೆಸಿದ್ದು, ಇದರ ಬೆನ್ನಿಗೇ ಮಣಿಪುರದಲ್ಲಿ ಮತ್ತೊಮ್ಮೆ ಹಿಂಸಾಚಾರ ಸ್ಫೋಟಗೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೊರೊಬೆಕ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗ್ರಾಮವೊಂದನ್ನು ಗುರಿಯಾಗಿಸಿಕೊಂಡು ಮುಂಜಾನೆ ಸುಮಾರು 5 ಗಂಟೆ ವೇಳೆಗೆ ಬಂಡುಕೋರರು ಅತ್ಯಾಧುನಿಕ ಆಯುಧಗಳ ಮೂಲಕ ಗುಂಡಿನ ದಾಳಿ ನಡೆಸಿದರು ಎಂದು ಅವರು ತಿಳಿಸಿದ್ದಾರೆ. ಅವರು ಬಾಂಬ್ ಗಳನ್ನೂ ಎಸೆದರು ಎಂದೂ ಅವರು ಹೇಳಿದ್ದಾರೆ.

ಇದಕ್ಕೆ ಪ್ರತೀಕಾರವಾಗಿ ಕೇಂದ್ರ ಮೀಸಲು ಪಡೆಯ ಯೋಧರೂ ಗುಂಡಿನ ದಾಳಿ ನಡೆಸಿದ್ದು, ಎರಡೂ ಗುಂಪುಗಳ ನಡುವೆ ಭಾರಿ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೆ ಹೆಚ್ಚುವರಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಈ ಘಟನೆಯಲ್ಲಿ ಯಾರೂ ಗಾಯಾಳುಗಳಾಗಿಲ್ಲ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News