ಬೇನಾಮಿ ಅಸ್ತಿ ಕಾಯ್ದೆಯ 2 ನಿಯಮಗಳು ಅಸಂವಿಧಾನಿಕವೆಂದು ಘೋಷಿಸಿದ್ದ ತೀರ್ಪನ್ನು ಹಿಂಪಡೆದ ಸುಪ್ರೀಂಕೋರ್ಟ್

Update: 2024-10-18 17:36 GMT

ಸುಪ್ರೀಂಕೋರ್ಟ್ | PTI

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಬೇನಾಮಿ ಆಸ್ತಿ ವಹಿವಾಟುಗಳನ್ನು ನಿಷೇಧಿಸುವ ಮತ್ತು ಅಂತಹ ಅಸ್ತಿಗಳನ್ನು ಸರಕಾರವು ವಶಕ್ಕೆ ತೆಗೆದುಕೊಳ್ಳಲು ಅನುಮತಿ ನೀಡುವ ಕಾನೂನಿನ ಎರಡು ನಿಯಮಗಳು ಅಸಂವಿಧಾನಿಕವೆಂದು ಘೋಷಿಸಿದ ತನ್ನ 2022ರ ತೀರ್ಪನ್ನು ಸುಪ್ರೀಂಕೋರ್ಟ್ ಶುಕ್ರವಾರ ಹಿಂತೆಗೆದುಕೊಂಡಿದೆ.

2022ರ ಆಗಸ್ಟ್ 23ರ ಬೇನಾಮಿ ಅಸ್ತಿ ವಹಿವಾಟುಗಳ ಕುರಿತ ತೀರ್ಪಿನ ಕುರಿತಾಗಿ ಕೇಂದ್ರ ಸರಕಾರದ ಪರಾಮರ್ಶೆಯನ್ನು ಭಾರತದ ಮುಖ್ಯನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಪುರಸ್ಕರಿಸಿತು. ಮತ್ತು ಆಗಿನ ಸಿಜೆಐ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠದ ತೀರ್ಪನ್ನು ಹಿಂತೆಗೆದುಕೊಂಡಿತು.

ಸರ್ವೋಚ್ಚ ನ್ಯಾಯಾಲಯವು 2022ರ ಆಗಸ್ಟ್‌ನಲ್ಲಿ ನೀಡಿದ ತೀರ್ಪಿನಲ್ಲಿ 1988ರ ಬೇನಾಮಿ ಆಸ್ತಿ ವಹಿವಾಟುಗಳ ಕಾಯ್ದೆಯ ಸೆಕ್ಷನ್‌ಗಳಾದ 3 (2) ಹಾಗೂ 5 ಅಸಂವಿಧಾನಿಕವೆಂದು ಘೋಷಿಸಿತ್ತು.

ಈ ಕಾಯ್ದೆಯ ಸೆಕ್ಷನ್ 3, ಬೇನಾಮಿ ( ಬದಲಿ ವ್ಯಕ್ತಿಗಳ ಮೂಲಕ ವ್ಯಕ್ತಿಯು ಹೊಂದಿರುವ ಆಸ್ತಿ) ವಹಿವಾಟುಗಳನ್ನು ನಿಷೇಧಿಸುತ್ತದೆಯಾದರೆ, ಸೆಕ್ಷನ್ 5 , ಇಂತಹ ಬೇನಾಮಿ ಅಸ್ತಿಗಳನ್ನು ಸರಕಾರವು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಆಸ್ಪದ ನೀಡುತ್ತದೆ.

ಈ ನಿಯಮಗಳ ಸಿಂಧುತ್ವವನ್ನು ಹಿಂದಿನ ನ್ಯಾಯಪೀಠದಲ್ಲಿ ಪ್ರಶ್ನಿಸಲಾಗಿಲ್ಲವೆಂಬ ಶುಕ್ರವಾರ ಕೇಂದ್ರ ಸರಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾ ಮೆಹ್ತಾ ಅವರ ವಾದವನ್ನು ಸರ್ವೋಚ್ಚ ನ್ಯಾಯಾಲಯ ಪುರಸ್ಕರಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News