‘ಹಿಂದಿ ಮಾಸಾಚರಣೆ’ ಕಾರ್ಯಕ್ರಮ ವಿರೋಧಿಸಿ ಪ್ರಧಾನಿ ಮೋದಿಗೆ ಸ್ಟಾಲಿನ್ ಪತ್ರ

Update: 2024-10-18 17:19 GMT

ಪ್ರಧಾನಿ ನರೇಂದ್ರ ಮೋದಿ, ಎಂ.ಕೆ.ಸ್ಟಾಲಿನ್ | PC : PTI 

ಹೊಸದಿಲ್ಲಿ: ಚೆನ್ನೈ ದೂರದರ್ಶನದ ಸುವರ್ಣ ಮಹೋತ್ಸವ ಆಚರಣೆಯ ಜೊತೆಗೆ ಹಿಂದಿ ಮಾಸಾಚರಣೆಯ ಸಮಾರೋಪ ಸಮಾರೋಪ ಸಮಾರಂಭವನ್ನು ಹಮ್ಮಿಕೊಂಡಿರುವುದ್ನು ವಿರೋಧಿಸಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.

ಭಾರತದ ಸಂವಿಧಾನವು ಯಾವುದೇ ಭಾಷೆಗೂ ರಾಷ್ಟ್ರೀಯ ಭಾಷಾ ಸ್ಥಾನಮಾನವನ್ನು ನೀಡಿಲ್ಲ. ಹಿಂದಿ ಹಾಗೂ ಇಂಗ್ಲಿಷ್ ಅನ್ನು ಅಧಿಕೃತ ಭಾಷೆಗಳೆಂಬುದಾಗಿ ಮಾತ್ರ ಪರಿಗಣಿಸಲಾಗಿದೆ. ಹಿಂದಿಯೇತರ ಭಾಷಿಕ ರಾಜ್ಯಗಳಲ್ಲಿ ಹಿಂದಿ ಮಾಸಾಚರಣೆಯು ಇತರ ಭಾಷೆಗಳನ್ನು ಕೀಳು ಮಾಡುವ ಪ್ರಯತ್ನವಾಗಿದೆ. ಹಿಂದಿಯೇತರ ಭಾಷೆಗಳನ್ನಾಡುವ ರಾಜ್ಯಗಳಲ್ಲಿ ಇಂತಹ ಹಿಂದಿ ಕೇಂದ್ರೀತ ಕಾರ್ಯಕ್ರಮಗಳನ್ನು ನಡೆಸುವುದನ್ನು ತಪ್ಪಿಸಬೇಕು ಮತ್ತು ಅದರ ಬದಲಿಗೆ ಆಯಾ ರಾಜ್ಯಗಳಲ್ಲಿ ಸ್ಥಳೀಯ ಭಾಷಾ ಮಾಸಾಚರಣೆ ನಡೆಸುವುದನ್ನು ಉತ್ತೇಜಿಸಬೇಕಾಗಿದೆ’’ ಎಂದು ಸ್ಟಾಲಿನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಚೆನ್ನೈ ತಮಿಳು ದೂರದರ್ಶನದ ಸುವರ್ಣ ಮಹೋತ್ಸವ ಹಾಗೂ ಹಿಂದಿ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಜೊತೆಯಾಗಿ ಗುರುವಾ ಸಂಜೆ ಆಯೋಜಿಸಿರುವುದು ಹಿಂದಿ ಹೇರಿಕೆಯ ಬಹಿರಂಗ ಯತ್ನವಾಗಿ. ಭಾರತದಲ್ಲಿ ಗಣನೀಯ ಸಂಖ್ಯೆಯ ಜನರು 122 ಭಾಷೆಗಳನ್ನು ಆಡುತ್ತಿದ್ದಾರೆ ಹಾಗೂ 1599 ಮಂದಿ ಇತರ ಭಾಷೆಗಳನ್ನು ಆಡುತ್ತಿದ್ದಾರೆ. ಹೀಗಿರುವಾಗ ಭಾರತದಂತಹ ವೈವಿಧ್ಯಮಯ ರಾಷ್ಟ್ರದಲ್ಲಿ ಕೇವಲ ಒಂದೇ ಭಾಷೆಯನ್ನು ಆಚರಿಸುವುದಕ್ಕೆ ಯಾವುದೇ ಸಮರ್ಥನೆ ಇಲ್ಲವೆಂದು ಸ್ಟಾಲಿನ್ ಅವರು ಹೇಳಿದ್ದಾರೆ.

‘‘ಒಂದು ವೇಳೆ ಕೇಂದ್ರ ಸರಕಾರವು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಬಯಸಿದ್ದಲ್ಲಿ ಅದು ಏಕಕಾಲಕ್ಕೆ ಸ್ಥಳೀಯ ಭಾಷೆಗಳ ಮಾಸಾಚರಣೆಯನ್ನು ಕೂಡಾ ನಡೆಸಬೇಕೆಂದು ಸ್ಟಾಲಿನ್ ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News