ಅತ್ಯಂತ ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಕೇರಳದ 12 ವರ್ಷದ ಬಾಲಕ ಬಲಿ

Update: 2024-07-04 16:11 IST
ಅತ್ಯಂತ ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಕೇರಳದ 12 ವರ್ಷದ ಬಾಲಕ ಬಲಿ

Photo credit: CDC

  • whatsapp icon

ತಿರುವನಂತಪುರಂ: ಕೇರಳದ ಕೊಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 12 ವರ್ಷದ ಬಾಲಕನೊಬ್ಬ ಅತ್ಯಂತ ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿನಿಂದ ಮೃತಪಟ್ಟಿದ್ದಾನೆ.

ಪ್ರೈಮರಿ‌ ಅಮೀಬಿಕ್‌ ಮೆನಿಂಗೋಎನ್ಸಿಫಾಲಿಟಿಸ್‌ ಕಾಯಿಲೆಯ ಚಿಕಿತ್ಸೆಗಾಗಿ ಆತನನ್ನು ದಾಖಲಿಸಲಾಗಿತ್ತು. ಈ ರೀತಿಯ ಸೋಂಕಿನಿಂದ ಕೇರಳದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಸಂಭವಿಸಿದ ಮೂರನೇ ಸಾವು ಇದಾಗಿದೆ.

ಏಳನೇ ತರಗತಿ ವಿದ್ಯಾರ್ಥಿ ಇ.ಪಿ. ಮೃದುಲ್‌ ಕಳೆದ ತಿಂಗಳು ತಲೆನೋವು ಮತ್ತು ವಾಂತಿ ಸಮಸ್ಯೆಯಿಂದ ಬಳಲಿದ್ದಾಗ ಆತನನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆರೋಗ್ಯ ಸಮಸ್ಯೆ ಎದುರಾಗುವ ಮುನ್ನ ಆತ ಕಾಲೇಜಿನ ಸಮೀಪವಿದ್ದ ಕೊಳವೊಂದರಲ್ಲಿ ಸ್ನಾನ ಮಾಡಿದ್ದ.

ಆತನನ್ನು ನಂತರ ಕೊಝಿಕ್ಕೋಡ್‌ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿತ್ತು. ಅಲ್ಲಿ ಆತ ಮೃತಪಟ್ಟಿದ್ದಾನೆ.

ಈ ಹಿಂದೆ ಜೂನ್‌ 12ರಂದು ಕಣ್ಣೂರಿನ 13 ವರ್ಷದ ಬಾಲಕಿಯೊಬ್ಬಳು ಹಾಗೂ ಮೇ 20ರಂದು ಮಲಪ್ಪುರಂನ 5 ವರ್ಷದ ಬಾಲಕಿ ಇದೇ ಸೋಂಕಿನಿಂದ ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News