ಕೇರಳ:ಅರಣ್ಯ ವೀಕ್ಷಕರ ಮೇಲೆ ಶಂಕಿತ ಮಾವೋವಾದಿಗಳಿಂದ ಗುಂಡಿನ ದಾಳಿ

Update: 2023-10-30 16:09 GMT

Photo- PTI

ಕಣ್ಣೂರು: ಇಲ್ಲಿಯ ಅರಳಂ ವನ್ಯಜೀವಿ ಅಭಯಾರಣ್ಯದಲ್ಲಿ ರವಿವಾರ ಅಪರಾಹ್ನ ಶಂಕಿತ ಮಾವೋವಾದಿಗಳು ಅರಣ್ಯ ಇಲಾಖೆಯ ವೀಕ್ಷಕರ ಮೇಲೆ ಗುಂಡಿನ ದಾಳಿಯನ್ನು ನಡೆಸಿರುವುದು ವರದಿಯಾಗಿದೆ.

ಐವರು ಶಂಕಿತ ಮಾವೋವಾದಿಗಳ ಗುಂಪು ವೀಕ್ಷಕರನ್ನು ನೋಡಿದ ಬಳಿಕ ಆಗಸದತ್ತ ಗುಂಡುಗಳನ್ನು ಹಾರಿಸಿದ್ದರು. ವೀಕ್ಷಕರು ಅಲ್ಲಿಂದ ಓಡಿ ಸುರಕ್ಷಿತ ಜಾಗದಲ್ಲಿ ಆಶ್ರಯ ಪಡೆದಿದ್ದರು. ಪರಾರಿಯಾಗುವ ಯತ್ನದಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಚಾವಾಚಿ ಪ್ರದೇಶದ ಬಳಿಯಿರುವ ಅಭಯಾರಣ್ಯದೊಳಗೆ ಈ ದಾಳಿ ನಡೆದಾಗ ಮೂವರು ಅರಣ್ಯ ವೀಕ್ಷಕರು ಮೂವರು ಗಾರ್ಡ್‌ಗಳೊಂದಿಗೆ ಕರ್ತವ್ಯದಲ್ಲಿದ್ದರು. ಅರಣ್ಯ ಅಧಿಕಾರಿಗಳ ಹೇಳಿಕೆಯಂತೆ ಯಾವುದೇ ಪ್ರಚೋದನೆಯಿಲ್ಲದೆ ಈ ದಾಳಿ ನಡೆದಿತ್ತು.

ಈ ಘಟನೆಯು ಅರಳಂ ವನ್ಯಜೀವಿ ಅಭಯಾರಣ್ಯದಲ್ಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಾವೋವಾದಿಗಳ ಇರುವಿಕೆಯನ್ನು ಸೂಚಿಸಿದೆ. ಅವರು ತಮ್ಮ ಚಟುವಟಿಕೆಗಳನ್ನು ಕೊಟ್ಟಿಯೂರು ಅಂಬಯತ್‌ ನಂತಹ ಪ್ರದೇಶಗಳಿಗೂ ವಿಸ್ತರಿಸಿದ್ದಾರೆ.

ಸ್ಥಳಿಯ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆಯನ್ನು ಆರಂಭಿಸಿದ್ದು, ಮಾವೋವಾದಿಗಳ ಪತ್ತೆಗಾಗಿ ಪ್ರಯತ್ನಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News