4 ವರ್ಷದಲ್ಲಿ 64 ಮಂದಿಯಿಂದ ಲೈಂಗಿಕ ಕಿರುಕುಳ: ಕೇರಳ ಬಾಲಕಿ ಆರೋಪ

Update: 2025-01-11 02:58 GMT

ಕೊಟ್ಟಾಯಂ: ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಹದಿಹರೆಯದ ಯುವತಿಯೊಬ್ಬರು ಕಳೆದ ನಾಲ್ಕು ವರ್ಷಗಳಲ್ಲಿ 64 ಮಂದಿಯಿಂದ ಲೈಂಗಿಕ ಕಿರುಕುಳ ಎದುರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಈ ಸಂಬಂಧ ಐದು ಮಂದಿಯನ್ನು ಬಂಧಿಸಲಾಗಿದ್ದು, ಆರನೇ ವ್ಯಕ್ತಿ ಈಗಾಗಲೇ ಜೈಲಿನಲ್ಲಿದ್ದಾನೆ. ಎರಡು ತಿಂಗಳ ಹಿಂದೆ ಈ ಯುವತಿಗೆ 18 ವರ್ಷ ತುಂಬಿತ್ತು.

ಪಟ್ಟಣಂತಿದ್ದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎನ್.ರಾಜೀವ್ ಅವರ ಪ್ರಕಾರ, ಯುವತಿ ಮೊದಲ ಬಾರಿಗೆ ಲೈಂಗಿಕ ಕಿರುಕುಳದ ಬಗ್ಗೆ ಶಾಲಾ ಕೌನ್ಸಿಲಿಂಗ್ ಸೆಷನ್ ವೇಳೆ ಬಹಿರಂಗಪಡಿಸಿದಳು. ಮಕ್ಕಳ ಕಲ್ಯಾಣ ಸಮಿತಿ ಮಧ್ಯಪ್ರವೇಶಿಸಿ ಈ ಸಂಬಂಧ ಪೊಲೀಸ್ ಪ್ರಕರಣ ದಾಖಲಿಸಿತ್ತು. ಕ್ರೀಡಾಪಟುವೊಬ್ಬ ಕ್ರೀಡಾ ಶಿಬಿರಗಳು ಸೇರಿದಂತೆ ಪಟ್ಟಣಂತಿಟ್ಟ ಜಿಲ್ಲೆಯ ವಿವಿಧೆಡೆಗಳಲ್ಲಿ ಲೈಂಗಿಕ ಕಿರುಕುಳ ನೀಡಿದ್ದ. ಕೋಚ್ಗಳು, ಸಹಪಾಠಿಗಳು ಹಾಗೂ ಸ್ಥಳೀಯರು ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ.

ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯುತ್ತಿದೆ. ಈ ಯುವತಿಗೆ ಮೊಬೈಲ್ ಫೋನ್ ಇಲ್ಲದ ಕಾರಣ ತಂದೆಯ ಮೊಬೈಲ್ ಬಳಸುತ್ತಿದ್ದಳು. ಈ ಫೋನ್ನಲ್ಲಿ ಯುವತಿ ತನಗೆ ಲೈಂಗಿಕ ಕಿರುಕುಳ ನೀಡಿದ ಸುಮಾರು 40 ಮಂದಿಯ ಹೆಸರು ಹಾಗೂ ದೂರವಾಣಿ ಸಂಖ್ಯೆ ದಾಖಲಿಸಿದ್ದಾಳೆ.

ಯುವತಿಯ ಕರುಣಾಜನಕ ಕಥೆ ಕೇಳಿ ಆಘಾತಗೊಂಡ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಈ ಆರೋಪಗಳು ನಿಜವೇ ಎಂದು ದೃಢಪಡಿಸಿಕೊಳ್ಳುವ ಸಲುವಾಗಿ ಮನಃಶಾಸ್ತ್ರಜ್ಞರಿಂದ ಕೌನ್ಸಿಲಿಂಗ್ ಮಾಡಿಸಿದ್ದಾರೆ. ಇದು ಅಪರೂಪದ ಪ್ರಕರಣ ಎಂಬ ಕಾರಾಣದಿಂದ ಎಸ್ಪಿಯವರಿಗೆ ಮಾಹಿತಿ ನೀಡಿ ತನಿಖೆಯ ಮೇಲೆ ನಿಗಾ ಇಡುವಂತೆ ಮನವಿ ಮಾಡಿಕೊಂಡಿದ್ದಾಗಿ ಸಮಿತಿ ಅಧ್ಯಕ್ಷರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News