ಲಖಿಂಪುರ ಖೇರಿ ಪ್ರಕರಣ ಆಶಿಷ್ ಮಿಶ್ರಾ ಜಾಮೀನು ಷರತ್ತು ಸಡಿಲಗೊಳಿಸಿದ ಸುಪ್ರೀಂ

Update: 2023-09-26 15:59 GMT

ಆಶಿಷ್ ಮಿಶ್ರಾ | Photo: NDTV 

ಹೊಸದಿಲ್ಲಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಪ್ರಧಾನ ಆರೋಪಿ ಹಾಗೂ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಅವರ ಜಾಮೀನು ಶರತ್ತನ್ನು ಸುಪ್ರೀಂ ಕೋರ್ಟ್ ಮಂಗಳವಾರ ಸಡಿಲಗೊಳಿಸಿದೆ. ಅನಾರೋಗ್ಯಕ್ಕೆ ತುತ್ತಾದ ತನ್ನ ತಾಯಿ ಹಾಗೂ ಮಗಳ ಆರೈಕೆ ಮಾಡಲು ದಿಲ್ಲಿಗೆ ತೆರಳಲು ನ್ಯಾಯಾಲಯ ಅಜಯ್ ಮಿಶ್ರಾಗೆ ಅನುಮತಿ ನೀಡಿದೆ.

ಈ ಪ್ರಕರಣವನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ದೀಪಂಕರ್ ದತ್ತಾ ಅವರನ್ನು ಒಳಗೊಂಡ ಪೀಠ, ಅಜಯ್ ಮಿಶ್ರಾ ಅವರ ಜಾಮೀನು ಷರತ್ತನ್ನು ಮಾರ್ಪಡಿಸಿದೆ. ಇದುವರೆಗೆ ಉತ್ತರಪ್ರದೇಶ ಹಾಗೂ ಎನ್ ಸಿ ಆರ್ ಗೆ ಪ್ರಯಾಣಿಸಲು ಆಶಿಷ್ ಮಿಶ್ರಾಗೆ ನಿರ್ಬಂಧ ವಿಧಿಸಲಾಗಿತ್ತು. ಆಶಿಷ್ ಮಿಶ್ರಾ ಅವರ ನ್ಯಾಯವಾದಿ, ಅವರ ತಾಯಿ ಹೊಸದಿಲ್ಲಿಯಲ್ಲಿರುವ ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ಪುತ್ರಿಗೆ ಕಾಲಿನ ವಿರೂಪದ ಕಾರಣಕ್ಕೆ ಚಿಕಿತ್ಸೆಯ ಅಗತ್ಯತೆ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನಲೆಯಲ್ಲಿ ದಿಲ್ಲಿಯಲ್ಲಿ ತಂಗಲು ಆಶಿಷ್ ಮಿಶ್ರಾಗೆ ನಾಯಾಧೀಶರು ಅನುಮತಿ ನೀಡಿದರು. ಆದರೆ, ಈ ಸಂದರ್ಭ ಯಾವುದೇ ಮಾದ್ಯಮ ಅಥವಾ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಬಾರದು ಎಂದು ನಿರ್ದೇಶಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News