ಜಮ್ಮುಕಾಶ್ಮೀರ, ಲಡಾಕ್ ನಲ್ಲಿ ಲಘುಭೂಕಂಪನ

Update: 2023-12-26 17:15 GMT

ಸಾಂದರ್ಭಿಕ ಚಿತ್ರ 

ಜಮ್ಮು: ಲಡಾಕ್ ಹಾಗೂ ಜಮ್ಮುಕಾಶ್ಮೀರದಲ್ಲಿ ಮಂಗಳವಾರ ಎರಡು ಲಘುಭೂಕಂಪನಗಳು ಸಂಭವಿಸಿವೆ. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲವೆಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಭೂಕಂಪನಗಳ ಕೇಂದ್ರ ಬಿಂದುಗಳು ಲಡಾಕ್ ನ ಲೇಹ್ ಹಾಗೂ ಜಮ್ಮುಕಾಶ್ಮೀರದ ಕಿಶ್ತವಾರ್ ಜಿಲ್ಲೆಗಳಲ್ಲಿದ್ದವು ಎಂದು ಅವು ಹೇಳಿವೆ.

ಮೊದಲ ಭೂಕಂಪನವು ಮಂಗಳವಾರ ನಸುಕಿನಲ್ಲಿ 1.10ರ ವೇಳೆಗೆ ಜಮ್ಮುಕಾಶ್ಮೀರದ ಕಿಶ್ತವಾರ್ ಜಿಲ್ಲೆಯಲ್ಲಿ ಸಂಭವಿಸಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.7ರಷ್ಟಿತ್ತು. ನೆಲದಿಂದ 5 ಕಿ.ಮೀ. ಆಳದಲ್ಲಿ, 34.33 ಡಿಗ್ರಿ ಆಕ್ಷಾಂಶ ಹಾಗೂ 77.07 ಡಿಗ್ರಿ ರೇಖಾಂಶದಲ್ಲಿ ಭೂಕಂಪನ ಸಂಭವಿಸಿದೆಯೆಂದು ಎನ್ಸಿಎಸ್ ಪ್ರಕಟಣೆ ತಿಳಿಸಿದೆ.

ಮತ್ತೊಂದು ಭೂಕಂಪನವು ನಸುಕಿನಲ್ಲಿ 4.33ರ ವೇಳೆಗೆ ಲೇಹ್ ಹಾಗೂ ಕಾರ್ಗಿಲ್ ಜಿಲ್ಲೆಗಳಲ್ಲಿ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯನ್ನು ದಾಖಲಿಸಿತ್ತೆಂದು ರಾಷ್ಟ್ರೀಯ ಭೂಕಂಪನ ಕೇಂದ್ರ (ಎನ್ಸಿಎಸ್) ತೀಳಿಸಿದೆ.

ಭೂಕಂಪನವು ಭೂಮಿಯಿಂದ ಐದು ಕಿ.ಮೀ. ಆಳದಲ್ಲಿ ಸಂಭವಿಸಿದ್ದು 34.33 ಡಿಗ್ರಿ ಆಕ್ಷಾಂಶ ಹಾಗೂ 77.07 ಡಿಗ್ರಿ ರೇಖಾಂಶದಲ್ಲಿತ್ತು ಎಂದು ಎನ್ಸಿಎಸ್ ತಿಳಿಸಿದೆ.

ಭೂಕಂಪನದ ಅನುಭವವಾಗುತ್ತಿದ್ದಂತೆ ನಿದ್ರೆಯ ಮಂಪರಿನಲ್ಲಿದ್ದ ನಿವಾಸಿಗಳು ಭಯಭೀತರಾಗಿ ಮನೆಗಳಿಂದ ಹೊರಗೋಡಿ ಬಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News