ಶಸ್ತ್ರಕ್ರಿಯೆ ನೇರ ಪ್ರಸಾರ: ಕೇಂದ್ರ, ಎನ್ಎಂಸಿಗೆ ಸುಪ್ರೀಂ ನೋಟಿಸ್
Update: 2023-10-13 16:50 GMT
ಹೊಸದಿಲ್ಲಿ: ಶಸ್ತ್ರಕ್ರಿಯೆಯನ್ನು ನೇರಪ್ರಸಾರ ಮಾಡುವುದರಿಂದ ಉಂಟಾಗುವ ಕಾನೂನಾತ್ಮಕ ಹಾಗೂ ನೈತಿಕ ವಿಷಯಗಳ ಬಗ್ಗೆ ಗಮನಸೆಳೆದಿರುವ ಅರ್ಜಿಯೊಂದನ್ನು ಸುಪ್ರೀಕೋರ್ಟ್ ಶುಕ್ರವಾರ ವಿಚಾರಣೆಗೆ ಸ್ವೀಕರಿಸಿದೆ. ಈ ವಿಷಯವಾಗಿ ಅದು ಕೇಂದ್ರ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಸೇರಿದಂತೆ ಸಂಬಂಧಪಟ್ಟ ಇತರರಿಂದ ಪ್ರತಿಕ್ರಿಯೆ ಕೇಳಿದೆ.
ಶಸ್ತ್ರಕ್ರಿಯೆಯ ನೇರ ಪ್ರಸಾರ ವಿರೋಧಿಸಿ ದಿಲ್ಲಿ ಮೂಲದ ಇಬ್ಬರು ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದು, ಭಾರತದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಕೇಂದ್ರ ಹಾಗೂ ಇತರರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಶಸ್ತ್ರಕ್ರಿಯೆಯ ನೇರ ಪ್ರಸಾರದ ಬಗ್ಗೆ ನಿಯಮಿತವಾಗಿ ಕಣ್ಗಾವಲಿರಿಸಲು ಸಮಿತಿಯೊಂದನ್ನು ನೇಮಿಸುವಂತೆ ಎನ್ಎಂಸಿಗೆ ನಿರ್ದೇಶನ ನೀಡಬೇಕೆಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ ಹಾಗೂ ಮಂದಿನ ಆಲಿಕೆಯನ್ನು ಮೂರು ವಾರಗಳ ಆನಂತರ ನಡೆಸಲು ನಿರ್ಧರಿಸಿದೆ.