ಮುಂಬೈನ ಧಾರಾವಿಗೆ ಭೇಟಿ ನೀಡಿದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ: ಚರ್ಮ ಕೈಗಾರಿಕಾ ಕಾರ್ಮಿಕರೊಂದಿಗೆ ಸಂವಾದ

Update: 2025-03-06 20:50 IST
Rahul Gandhi

ರಾಹುಲ್ ಗಾಂಧಿ | PC : X 

  • whatsapp icon

ಮುಂಬೈ: ಗುರುವಾರ ದೇಶದ ಆರ್ಥಿಕ ರಾಜಧಾನಿ ಮುಂಬೈಗೆ ಖಾಸಗಿ ಭೇಟಿಗೆ ಆಗಮಿಸಿದ ಲೋಕಸಭಾ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ವೇಳೆ ಸ್ಥಳೀಯ ನಾಯಕರು ಹಾಗೂ ಸಂಸದ ವರ್ಷ ಗಾಯಕ್ವಾಡ್ ರೊಂದಿಗೆ ನಗರದ ಬಹು ದೊಡ್ಡ ಕೊಳಗೇರಿ ಧಾರಾವಿಗೆ ಭೇಟಿ ನೀಡಿ, ಚರ್ಮ ಕೈಗಾರಿಕಾ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.

ಚರ್ಮ ಕಾರ್ಮಿಕರು ಎದುರಿಸುತ್ತಿರುವ ಸವಾಲುಗಳನ್ನು ಅರಿಯುವ ಪ್ರಯತ್ನದ ಭಾಗವಾಗಿ ಅವರು ಚರ್ಮೋದ್ಯಮದ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಿಗಳು ಹಾಗೂ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ನಂತರ, ಅವರು ಧಾರಾವಿಯ ಪ್ರಖ್ಯಾತ ಚಮಾರ್ ಸ್ಟುಡಿಯೊಗೂ ಭೇಟಿ ನೀಡಿದರು.

ಚರ್ಮೋದ್ಯಮದ ಮಾನವ ಸಂಪನ್ಮೂಲ ಎದುರಿಸುತ್ತಿರುವ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವ ಗುರಿಯನ್ನು ಅವರ ಈ ಭೇಟಿ ಹೊಂದಿತ್ತು.

ಅದಾನಿ ಸಮೂಹಕ್ಕೆ ಪ್ರಮುಖ ಯೋಜನೆಗಳನ್ನು ಮಂಜೂರು ಮಾಡಿರುವ ಕುರಿತು ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿರುವ ರಾಹುಲ್ ಗಾಂಧಿ, ಅದಾನಿ ಸಮೂಹಕ್ಕೆ ಆಡಳಿತಾರೂಢ ಬಿಜೆಪಿ ನೆರವು ಒದಗಿಸುತ್ತಿದೆ ಎಂದು ಆರೋಪಿಸಿದರು.

ಇದಕ್ಕೂ ಮುನ್ನ, ಗುರುವಾರ ಬೆಳಗ್ಗೆ ವರ್ಷ ಗಾಯಕ್ವಾಡ್, ಸತೇಜ್ ಪೈಲ್, ಭಾಯಿ ಜಾಗ್ತಪ್ ಹಾಗೂ ವಿಜಯ್ ವಡೆಟ್ಟಿದಾರ್ ಸೇರಿದಂತೆ ವಿವಿಧ ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News