ದಾವೋಸ್ ಪ್ರವಾಸದ ರೂ. 1.58 ಕೋಟಿ ಬಿಲ್ ಪಾವತಿಸಿಲ್ಲ ಎಂದು ಮಹಾರಾಷ್ಟ್ರ ಸರಕಾರಕ್ಕೆ ನೋಟಿಸ್ ನೀಡಿದ ಸ್ವಿಸ್ ಸಂಸ್ಥೆ

Update: 2024-10-05 07:51 GMT

ಏಕನಾಥ್ ಶಿಂದೆ (Photo: PTI)

ಮುಂಬೈ: ರೂ. 1.58 ಕೋಟಿ ಬಿಲ್ ಪಾವತಿಸಿಲ್ಲವೆಂದು ಸ್ವಿಝರ್ ಲೆಂಡ್ ಮೂಲದ ಸೇವಾ ಸಂಸ್ಥೆ SKAAH GmbH ಮಹಾರಾಷ್ಟ್ರ ಸರಕಾರಕ್ಕೆ ಕಾನೂನು ನೋಟಿಸ್ ರವಾನಿಸಿದೆ ಎಂದು ವರದಿಯಾಗಿದೆ.

ಈ ವರ್ಷದ ಜನವರಿ ತಿಂಗಳಲ್ಲಿ ದಾವೋಸ್ ನಲ್ಲಿ ಜರುಗಿದ್ದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಏಕನಾಥ್ ಶಿಂದೆ, ಸಚಿವರು ಹಾಗೂ ಇನ್ನಿತರ ಅಧಿಕಾರಿಗಳಿಗೆ ಒದಗಿಸಲಾಗಿದ್ದ ಆತಿಥ್ಯಕ್ಕೆ ಈ ಬಿಲ್ ಸಂಬಂಧಿಸಿದೆ ಎಂದು ವರದಿಯಾಗಿದೆ.

ನೋಟಿಸ್ ಪ್ರಕಾರ, ಎಂಐಡಿಸಿ ಒಟ್ಟಾರೆ ಮೊತ್ತದಲ್ಲಿ ಈವರೆಗೆ ರೂ. 3.75 ಕೋಟಿ ಮೊತ್ತವನ್ನು ಪಾವತಿಸಿದ್ದು, ಉಳಿದ ರೂ. 1.58 ಕೋಟಿ ಮೊತ್ತವನ್ನು SKAAH GmbH ಸಂಸ್ಥೆಗೆ ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗಿದೆ.

ಈ ಕುರಿತು The Indian Express ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಎಂಐಡಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ವೆಲ್ರಾಸು, “ನನಗೆ ಯಾವುದೇ ನೋಟಿಸ್ ಬಗ್ಗೆ ತಿಳಿದಿಲ್ಲ. ಆದರೆ, ಎಂಐಡಿಸಿ ವೋಚರ್ ಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜ್ಯೇಷ್ಠತೆಯ ಆಧಾರದಲ್ಲಿ ಈ ವಿಷಯದ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News