ಹರ್ಯಾಣ ವಿಧಾನಸಭಾ ಚುನಾವಣೆ| ಮತಗಟ್ಟೆ ಬಳಿ ಕಾಂಗ್ರೆಸ್ ಮಾಜಿ ಶಾಸಕ ನನ್ನನ್ನು ಥಳಿಸಿದ್ದಾರೆ; ಪಕ್ಷೇತರ ಅಭ್ಯರ್ಥಿ ಆರೋಪ

Update: 2024-10-05 12:18 IST
ಹರ್ಯಾಣ ವಿಧಾನಸಭಾ ಚುನಾವಣೆ| ಮತಗಟ್ಟೆ ಬಳಿ ಕಾಂಗ್ರೆಸ್ ಮಾಜಿ ಶಾಸಕ ನನ್ನನ್ನು ಥಳಿಸಿದ್ದಾರೆ; ಪಕ್ಷೇತರ ಅಭ್ಯರ್ಥಿ ಆರೋಪ

Screengrab: X/@PTI_News

  • whatsapp icon

ಚಂಡೀಗಢ: ಹರ್ಯಾಣ ವಿಧಾನಸಭಾ ಚುನಾವಣೆಯ ಮತದಾನ ಪ್ರಗತಿಯಲ್ಲಿದ್ದು, ಈ ನಡುವೆ ಮೆಹಾಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಲರಾಂ ಡಾಂಗಿ ಅವರ ತಂದೆ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಆನಂದ್ ಸಿಂಗ್ ಡಾಂಗಿ ನನ್ನನ್ನು ಥಳಿಸಿದ್ದಾರೆಂದು ಪಕ್ಷೇತರ ಅಭ್ಯರ್ಥಿ ಬಾಲರಾಜ್ ಕುಂದು ಆರೋಪಿಸಿದ್ದಾರೆ.

ಮೆಹಾಮ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರ ಬಳಿ ಮಾಜಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಡಾಂಗಿ, ಅವರ ಆಪ್ತ ಸಹಾಯಕ ಮತ್ತು ಅವರ ಬೆಂಬಲಿಗರು ನನ್ನನ್ನು ಥಳಿಸಿದ್ದಾರೆಂದು ಪಕ್ಷೇತರ ಅಭ್ಯರ್ಥಿ ಬಾಲರಾಜ್ ಕುಂದು ದೂರಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಬಾಲರಾಜ್ ಕುಂದು ಹರಿದ ಬನಿಯನ್ ನಲ್ಲಿ ಮತಗಟ್ಟೆಯೊಂದರ ಬಳಿ ನಿಂತಿರುವುದು ಕಂಡು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News