ಮಣಿಪುರ: ಮಹಿಳೆಯರ ಬೆತ್ತಲೆ ಮೆರವಣಿಗೆ ಖಂಡಿಸಿ ಚತ್ತೀಸ್ ಗಢ ಬಂದ್
ರಾಯಪುರ: ಕುಕಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಸರ್ವ ಆದಿವಾಸಿ ಸಮಾಜ (SAS) ಕರೆ ನೀಡಿದ್ದ ಬಂದ್ಗೆ ಬೆಂಬಲ ನೀಡಲು ಬಸ್ತಾರ್ ವಿಭಾಗ ಸೋಮವಾರ ವ್ಯಾಪಾರ ಹಾಗೂ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿರುವುದು ಅಭೂತಪೂರ್ವ ಒಗ್ಗಟ್ಟಿನ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ರಾಜ್ಯದ ಬುಡಕಟ್ಟು ಸಂಘಟನೆಗಳನ್ನು ಪ್ರತಿನಿಧಿಸುತ್ತಿರುವ ಮಾತೃ ಸಂಘಟನೆ ಎಸ್ಎಎಸ್, ಮಣಿಪುರದಲ್ಲಿ ಕುಕಿ ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ತಮ್ಮ ಸಾಮೂಹಿಕ ಪ್ರತಿಭಟನೆಯ ಧ್ವನಿಯಾಗಿ ಈ ಬಂದ್ ಅನ್ನು ಆಯೋಜಿಸಿತ್ತು.
ಕಂಕೇರ್, ಕೊಂಡಗಾಂವ್, ನಾರಾಯಣಪುರ, ಬಸ್ತಾರ್, ಬಿಜಾಪುರ, ದಾಂತೆವಾಡ ಹಾಗೂ ಸುಕ್ಮಾ ಜಿಲ್ಲೆಗಳಲ್ಲಿ ಬಂದ್ ನಡೆಸಲಾಯಿತು. ಆದರೆ, ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಂದ್ಗೆ ಸಮಾಜದ ಎಲ್ಲ ವರ್ಗದ ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಕುಕಿ ಮಹಿಳೆಯರ ಮೇಲೆ ನಡೆದ ಅಮಾನವೀಯ ದೌರ್ಜನ್ಯ ಖಂಡಿಸಲು ಜನರು ಈ ಬಂದ್ ಗೆ ಕೈ ಜೋಡಿಸಿದರು.