ಆಯ್ದ ದೇಶಗಳಲ್ಲಿ ಅನುಮೋದನೆಗೊಂಡ ಔಷಧಗಳಿಗೆ ಭಾರತದಲ್ಲಿ ಕ್ಲಿನಿಕಲ್ ಟ್ರಯಲ್ ಬೇಕಾಗಿಲ್ಲ: ವರದಿ
ಹೊಸದಿಲ್ಲಿ: ಅಮೆರಿಕ, ಬ್ರಿಟನ್, ಜಪಾನ್, ಆಸ್ಟ್ರೇಲಿಯಾ, ಕೆನಡಾ ಹಾಗೂ ಯೂರೋಪಿಯನ್ ಒಕ್ಕೂಟ ದೇಶಗಳಲ್ಲಿ ಅನುಮೋದನೆಗೊಂಡಿರುವ ಕೆಲವು ನಿರ್ಧಿಷ್ಟ ಔಷಧಗಳಿಗೆ ಭಾರತದಲ್ಲಿ ಕ್ಲಿನಿಕಲ್ ಟ್ರಯಲ್ ಬೇಕಾಗಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.
ಈ ವಿನಾಯಿತಿಯನ್ನು ಐದು ಪ್ರವರ್ಗದ ಔಷಧಗಳಿಗೆ ನೀಡಲಾಗಿದೆ. ಅಪರೂಪದ ಕಾಯಿಲೆಗಳಿಗೆ ಬಳಸಲಾಗುವ ಔಷಧಗಳು, ತಳಿ ಹಾಗೂ ಕೋಶ ಚಿಕಿತ್ಸಾ ಉತ್ಪನ್ನಗಳು, ಸಾಂಕ್ರಾಮಿಕ ಪರಿಸ್ಥಿತಿಗಳಲ್ಲಿ ಬಳಸಲಾಗುವ ಔಷಧಗಳು, ವಿಶೇಷ ರಕ್ಷಣಾ ಅಗತ್ಯಗಳಿಗೆ ಬಳಸಲಾಗುವ ಔಷಧಗಳು ಹಾಗೂ ಹಾಲಿ ಪ್ರಮಾಣೀಕೃತ ಆರೈಕೆಯ ಮೇಲೆ ಗಮನಾರ್ಹ ಚಿಕಿತ್ಸಾತ್ಮಕ ಸುಧಾರಣೆ ಹೊಂದಿರುವ ಔಷಧಗಳು ಈ ವಿನಾಯಿತಿಯಲ್ಲಿ ಸೇರಿವೆ.
ಈ ವಿನಾಯಿತಿಯಿಂದ ಕ್ಯಾನ್ಸರ್ ನಂಥ ರೋಗಗಳ ಚಿಕಿತ್ಸೆ, ಅಪರೂಪದ ಕಾಯಿಲೆಯಾದ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA) ಡಷೆನ್ ಮಸ್ಕ್ಯುಲರ್ ಡಿಸ್ಟ್ರೋಫಿ (DMA) ಹಾಗೂ ಭಾರತದಲ್ಲಿನ ಸ್ವಯಂಚಾಲಿತ ರೋಗ ನಿರೋಧಕಗಳಿಗೆ ಚಿಕಿತ್ಸೆ ನೀಡಲು ಆಧುನಿಕ ಔಷಧಗಳ ಲಭ್ಯವಾಗಲಿದೆ ಎನ್ನಲಾಗಿದೆ.
ಈ ಕುರಿತು ಆಗಸ್ಟ್ 7ರಂದು ಭಾರತೀಯ ಔಷಧ ಮಹಾ ನಿಯಂತ್ರಕರು ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ.