ತಪ್ಪು ದಾರಿಗೆಳೆಯುವ ಜಾಹೀರಾತು: ಪತಂಜಲಿ ಸ್ಥಾಪಕರಿಗೆ ಸುಪ್ರೀಂ ಕೋರ್ಟ್‌ ತರಾಟೆ

Update: 2024-04-11 06:08 GMT

ಸುಪ್ರೀಂ ಕೋರ್ಟ್‌ | PC : PTI 

ಹೊಸದಿಲ್ಲಿ: ತಪ್ಪು ದಾರಿಗೆಳೆಯುವ ಜಾಹೀರಾತುಗಳ ಪ್ರಕರಣದಲ್ಲಿ ಪತಂಜಲಿ ಸ್ಥಾಪಕರಾದ ಯೋಗಗುರು ರಾಮದೇವ್‌ ಮತ್ತು ಬಾಲಕೃಷ್ಣ ಅವರು ಎರಡನೇ ಬಾರಿ ಸಲ್ಲಿಸಿದ ಕ್ಷಮೆಯಾಚನೆಯನ್ನೂ ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. “ನಾವು ಕುರುಡರಲ್ಲ, ಈ ಪ್ರಕರಣದಲ್ಲಿ ಉದಾರಿಗಳಾಗುವುದು ನಮಗೆ ಬೇಕಿಲ್ಲ,” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪತಂಜಲಿ ಸಂಸ್ಥೆಯ ವಿರುದ್ಧ ಇಲ್ಲಿಯ ತನಕ ಕ್ರಮ ಕೈಗೊಳ್ಳದೇ ಇದ್ದ ಉತ್ತರಾಖಂಡ ಪರವಾನಗಿ ಪ್ರಾಧಿಕಾರವನ್ನೂ ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತಲ್ಲದೆ ಈ ಕುರಿತಂತೆ ಕೇಂದ್ರದ ಉತ್ತರದಿಂದ ತನಗೆ ತೃಪ್ತಿಯಾಗಿಲ್ಲ ಎಂದು ಹೇಳಿದೆ.

“ಕ್ಷಮೆಯಾಚನೆ ಕಾಗದದಲ್ಲಿದೆ, ಬೆನ್ನು ಗೋಡೆಗೆ ವಿರುದ್ಧವಾಗಿದೆ. ಇದನ್ನು ಸ್ವೀಕರಿಸುವುದಿಲ್ಲ. ಲಿಖಿತ ಭರವಸೆಯ ಉದ್ದೇಶಪೂರ್ವಕ ಉಲ್ಲಂಘನೆ ಎಂದು ತಿಳಿದಿದ್ದೇವೆ,” ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಎ ಅಮಾನುಲ್ಲಾ ಅವರ ಪೀಠ ಹೇಳಿದೆ.

ರಾಮದೇವ್‌ ಮತ್ತು ಬಾಲಕೃಷ್ಣ ಇಬ್ಬರೂ ಆರಂಭದಲ್ಲಿ ತಮ್ಮ ಕ್ಷಮೆಯಾಚನೆಯನ್ನು ಮಾಧ್ಯಮಗಳಿಗೆ ಕಳಿಸಿದ್ದರು. “ವಿಚಾರ ನ್ಯಾಯಾಲಯಕ್ಕೆ ಆಗಮಿಸುವ ತನಕ ಅವರು ನಮಗೆ ಅಫಿಡವಿಟ್‌ ಸಲ್ಲಿಸಬೇಕೆಂದು ತಿಳಿಯಲಿಲ್ಲ. ಅವರು ನಿನ್ನೆ ಸಂಜೆ 7.30ಕ್ಕೆ ಮಾಧ್ಯಮಗಳಿಗೆ ಮೊದಲು ಕಳಿಸಿದ್ದರು ನಮಗೆ ಅಪ್‌ಲೋಡ ಮಾಡಿರಲಿಲ್ಲ. ಅವರು ಸ್ಪಷ್ಟವಾಗಿ ಪ್ರಚಾರದಲ್ಲಿ ನಂಬಿಕೆಯಿರಿಸಿದ್ದಾರೆ,” ಎಂದು ಜಸ್ಟಿಸ್‌ ಕೊಹ್ಲಿ ಹೇಳಿದರು.

ಉತ್ತರಾಖಂಡ ಪರವಾನಗಿ ಪ್ರಾಧಿಕಾರವನ್ನು ಕಟುವಾಗಿ ಟೀಕಿಸಿದ ನ್ಯಾಯಾಲಯ “ರೋಗ ಗುಣವಾಗುತ್ತದೆ ಎಂದು ನಂಬಿ ಪತಂಜಲಿ ಔಷಧಿ ಸೇವಿಸಿದ ಜನರ ವಿಚಾರವೇನು?” ಎಂದು ಪ್ರಶ್ನಿಸಿತು. ನಂತರ ಪ್ರಾಧಿಕಾರ ಕ್ಷಮೆಯಾಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.

ಈ ಪ್ರಕರಣದ ತೀರ್ಪನ್ನು ಎಪ್ರಿಲ್‌ 16ರಂದು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News