ವಕ್ಫ್ ಮಸೂದೆ | ಜಗದಾಂಬಿಕಾ ಪಾಲ್ ವಿರುದ್ಧ ಪ್ರತಿಪಕ್ಷದ ಸದಸ್ಯರಿಂದ ಪ್ರತಿಭಟನೆ

Update: 2024-11-05 15:43 GMT

Photo: PTI

ಹೊಸದಿಲ್ಲಿ : ವಕ್ಫ್ (ತಿದ್ದುಪಡಿ) ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿರುವುದರ ಕುರಿತಂತೆ ಸಮಿತಿಯ ಭಾಗವಾಗಿರುವ ಪ್ರತಿಪಕ್ಷದ ಸಂಸದರು ಮಂಗಳವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.

ಸ್ಪೀಕರ್ ಅವರು ನಮ್ಮ ಅಹವಾಲನ್ನು ತಾಳ್ಮೆಯಿಂದ ಆಲಿಸಿದ್ದಾರೆ ಹಾಗೂ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನಮಗೆ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

‘‘ಇದು ತುಂಬಾ ಸೊಗಸಾದ ಚರ್ಚೆ. ಅವರು ನಮ್ಮ ಮೇಲೆ ಕರುಣೆ ತೋರಿದರು. ತುಂಬಾ ತಾಳ್ಮೆಯಿಂದ ನಮ್ಮ ಮಾತುಗಳನ್ನು ಆರಿಸಿದರು. ಈ ವಿಷಯದ ಕುರಿತಂತೆ ಪರಿಶೀಲಿಸಲಾಗುವುದು ಎಂದು ಹೇಳಿದರು’’ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ತಿಳಿಸಿದ್ದಾರೆ.

ಈ ಸಂದರ್ಭ ಕಾಂಗ್ರೆಸ್ ನ ಮುಹಮ್ಮದ್ ಜಾವೇದ್, ಇಮ್ರಾನ್ ಮಸೂದ್, ಡಿಎಂಕೆಯ ಎ. ರಾಜಾ, ಎಐಎಂಐಎಂನ ಅಸದುದ್ದೀನ್ ಉವೈಸಿ, ಎಎಪಿಯ ಸಂಜಯ್ ಸಿಂಗ್ ಹಾಗೂ ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಸೇರಿದಂತೆ ಪ್ರತಿಪಕ್ಷದ ಸಂಸದರು ಸಹಿ ಮಾಡಿದ ಪತ್ರವನ್ನು ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News