ಅಂತರರಾಜ್ಯ ಗಡಿ ವಿವಾದವನ್ನು ಪರಿಹರಿಸಲು ಒಪ್ಪಿಕೊಂಡ ಮಿಜೋರಾಂ – ಅಸ್ಸಾಂ

Update: 2024-02-09 16:08 GMT

 ಲಾಲ್ದುಹೊಮಾ,  ಹಿಮಂತ ಬಿಸ್ವ ಶರ್ಮಾ  | Photo: NDTV 

ಐಜ್ವಾಲ್: ಸುದೀರ್ಘ ಸಮಯದಿಂದ ಬಾಕಿಯುಳಿದಿರುವ ಅಂತರರಾಜ್ಯ ಗಡಿ ವಿವಾದವನ್ನು ಪರಿಹರಿಸಿಕೊಳ್ಳಲು ಮಿಜೋರಾಂ ಮತ್ತು ಅಸ್ಸಾಂ ಶುಕ್ರವಾರ ಒಪ್ಪಿಕೊಂಡಿವೆ.   

ಬೆಳಿಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಪ್ರಸಕ್ತ ಗುವಾಹಟಿ ಪ್ರವಾಸದಲ್ಲಿರುವ ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೊಮಾ ಅವರನ್ನು ಔತಣಕ್ಕೆ ಆಹ್ವಾನಿಸಿದ್ದು, ಈ ವೇಳೆ ಉಭಯ ನಾಯಕರು ಗಡಿ ಸಮಸ್ಯೆಯನ್ನು ಚರ್ಚಿಸಿದರು. ವಿವಾದವನ್ನು ಪರಿಹರಿಸಿಕೊಳ್ಳಲು ಸಾಮೂಹಿಕ ಪ್ರಯತ್ನಗಳನ್ನು ಮಾಡಲು ಮತ್ತು ಉಭಯ ರಾಜ್ಯಗಳು ಗಡಿ ಮಾತುಕತೆಗಳನ್ನು ನಡೆಸುವವರೆಗೆ ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲೂ ಅವರು ಒಪ್ಪಿಕೊಂಡರು.

ಮಿಜೋರಾಂನ ಐಜ್ವಾಲ್, ಕೊಲಾಸಿಬ್ ಮತ್ತು ಮಮಿತ್ ಜಿಲ್ಲೆಗಳು ಅಸ್ಸಾಮಿನನ ಕಾಚಾರ್, ಕರೀಮ್ ಗಂಜ್ ಮತ್ತು ಹೈಲಂಕಂಡಿ ಜಿಲ್ಲೆಗಳೊಂದಿಗೆ 164.6 ಕಿ.ಮೀ.ಉದ್ದದ ಗಡಿಯನ್ನು ಹಂಚಿಕೊಂಡಿವೆ.

ಮಿಜೋರಾಂ ಮತ್ತು ಅಸ್ಸಾಂ ನಡುವಿನ ಗಡಿವಿವಾದವು 2021, ಜುಲೈನಲ್ಲಿ ವಿಕೋಪಕ್ಕೆ ತಿರುಗಿದ್ದು,ಉಭಯ ರಾಜ್ಯಗಳ ಪೋಲಿಸ್ ಪಡೆಗಳ ನಡುವೆ ಅಂತರರಾಜ್ಯ ಗಡಿಯಲ್ಲಿ ಗುಂಡಿನ ಚಕಮಕಿ ನಡೆದು ಅಸ್ಸಾಮಿನ ಆರು ಪೋಲಿಸರು ಮತ್ತು ಓರ್ವ ನಾಗರಿಕ ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News