ಮೋದಿ ಸರಕಾರದ ಪಾಕ್ ನೀತಿಯಲ್ಲಿ ಬದಲಾವಣೆಯ ಸುಳಿವು ನೀಡಿದ ಎಸ್. ಜೈಶಂಕರ್
ಹೊಸದಿಲ್ಲಿ: ಮೋದಿ ಸರಕಾರದ ಪಾಕ್ ನೀತಿಯಲ್ಲಿ ವಿಶಿಷ್ಟ ಬದಲಾವಣೆಯಾಗುವ ಸಾಧ್ಯತೆಯ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಶುಕ್ರವಾರ ಸುಳಿವು ನೀಡಿದ್ದಾರೆ. ಅಬಾಧಿತವಾಗಿ ಮಾತುಕತೆ ನಡೆಸುವುದರಲ್ಲೇ ನಿರತವಾಗಿರುವಂತಹ ಕಾಲವು ಕೊನೆಗೊಂಡಿದೆ. ಆದರೆ ಗಡಿಯುದ್ದಕ್ಕೂ ನಡೆಯುವ ಸಕಾರಾತ್ಮಕ ಅಥವಾ ನಕಾರಾತ್ಮಕ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಲು ಹೊಸದಿಲ್ಲಿ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವುದನ್ನು ಬೆಂಬಲಿಸುವುದರ ವಿರುದ್ಧ ಪಾಕಿಸ್ತಾನ ಹಾಗೂ ಆ ದೇಶದಲ್ಲಿರುವ ಶಕ್ತಿಗಳಿಗೆ ಅವರು ಕಟು ಎಚ್ಚರಿಕೆಯನ್ನು ನೀಡಿದರು. ಆದರೆ ಪಾಕಿಸ್ತಾನದ ಜೊತೆ ಯಾವ ರೀತಿಯ ಬಾಂಧವ್ಯವನ್ನು ನಾವು ಹೊಂದಬಹುದು ಎಂಬುದರ ಬಗ್ಗೆ ಅವಲೋಕನ ನಡೆಸಬೇಕೆಂಬುದೇ ನಮ್ಮ ಮುಂದಿರುವ ವಿಚಾರವಾಗಿದೆ ಎಂದರು.
ಈಗ ಇರುವಂತೆ ಪಾಕಿಸ್ತಾನದ ಜೊತೆ ಬಾಂಧವ್ಯವನ್ನು ಮುಂದುವರಿಸುವುದರಲ್ಲಿ ಭಾರತಕ್ಕೆ ತೃಪ್ತಿಯಿದೆಯೇ ಎಂಬ ಪ್ರಶ್ನೆಗೆ ಅವರು, ‘‘ನಾವು ಜಡತ್ವವನ್ನು ಹೊಂದಿಲ್ಲ.ಗಡಿಯುದ್ದಕ್ಕೂ ಸಕಾರಾತ್ಮಕ ಅಥವಾ ನಕಾರಾತ್ಮಕ ಘಟನೆಗಳು ನಡೆದಾಗ, ಅದಕ್ಕೆ ತಕ್ಕಂತೆ ನಾವು ಪ್ರತಿಕ್ರಿಯಿಸುತ್ತೇವೆ’’ ಎಂದು ಜೈಶಂಕರ್ ತಿಳಿಸಿದರು.
ಜಮ್ಮುಕಾಶ್ಮೀರ ಗಡಿವಿವಾದವು ಭಾರತ ಹಾಗೂ ಪಾಕಿಸ್ತಾನ ನಡುವೆ ಬಿಕ್ಕಟ್ಟಿಗೆ ಕಾರಣವಾಗಿದೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಆರ್ಥಿಕ ಹಾಗೂ ವ್ಯೆಹಾತ್ಮಕ ಬೆಂಬಲವನ್ನು ನೀಡುತ್ತಿರುವುದಾಗಿ ಭಾರತವು ಕಳವಳವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿಯೂ ಈ ಬಗ್ಗೆ ಧ್ವನಿಯೆತ್ತಿದೆ.
ಹೇಮಾ ಸಮಿತಿ ವರದಿಯ ಬಗ್ಗೆ ಎಫ್‌ಇಕೆಎ ಅಧ್ಯಕ್ಷರ ಮೌನಕ್ಕೆ ಖಂಡನೆ: ನಿರ್ದೇಶಕರ ಯೂನಿಯನ್‌ಗೆ ಆಶೀಕ್ ಅಬು ರಾಜೀನಾಮೆ (ವಾ)
ತಿರುವನಂತಪುರ: ಕೇರಳದ ಸಿನೆಮಾ ಉದ್ಯೋಗಿಗಳ ಒಕ್ಕೂಟ (ಎಫ್‌ಇಕೆಎ)ದ ನಿರ್ದೇಶಕರ ಯೂನಿಯನ್‌ಗೆ ಖ್ಯಾತ ನಿರ್ದೇಶಕ ಆಶೀಕ್ ಅಬು ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಕಲಾವಿದೆಯರ ಮೇಲೆ ಲೈಂಗಿಕ ದೌರ್ಜನ್ಯವನ್ನು ಬಯಲಿಗೆಳೆದ ಹೇಮಾ ಸಮಿತಿಯ ವರದಿಯ ಬಗ್ಗೆ ಯೂನಿಯನ್ ‘ಅಸಹನೀಯ ಮೌನ’ ವಹಿಸಿರುವುದನ್ನು ವಿರೋಧಿಸಿ ತಾನು ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದ್ದಾರೆ.
ಎಫ್‌ಇಕೆಎ ಪ್ರಧಾನ ಕಾರ್ಯದರ್ಶಿ ಬಿ. ಉನ್ನಿಕೃಷ್ಣನ್ ಅವರು ಹೇಮಾ ಸಮಿತಿಯ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡದೆ ಇರುವುದರ ವಿರುದ್ಧ ಸಂಘದ ಹಲವಾರು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಅಬು ತನ್ನ ರಾಜೀನಾಮೆಯನ್ನು ಪ್ರಕಟಿಸಿದ್ದಾರೆ.
ಎಫ್‌ಇಕೆಎ ಸಂಘಟನೆ ಹಾಗೂ ಅದರ ನಾಯಕತ್ವವು ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಈಡೇರಿಸಲು ವಿಫಲವಾಗಿದೆಯೆಂದು ಅಬು ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.