ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ | ಮೂವರು ಆರೋಪಿಗಳ ಖುಲಾಸೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಕುಟುಂಬ

Update: 2024-08-21 16:33 GMT

ನರೇಂದ್ರ ದಾಭೋಲ್ಕರ್ | File Photo

ಮುಂಬೈ : ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ದಾಭೋಲ್ಕರ್ ಅವರ ಕುಟುಂಬ ಬಾಂಬೆ ಉಚ್ಛ ನ್ಯಾಯಾಲಯವನ್ನು ಸಂಪರ್ಕಿಸಿದೆ.

ಇದೇ ಪ್ರಕರಣದ ಇತರ ಇಬ್ಬರು ದೋಷಿಗಳ ವಿರುದ್ಧ ಕ್ರಿಮಿನಲ್ ಪಿತೂರಿ ಹಾಗೂ ಯುಎಪಿಎ ಅಡಿಯಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿದ ಪ್ರಕರಣಗಳನ್ನು ಕೂಡ ದಾಖಲಿಸಲಾಗಿತ್ತು. ಆದರೆ, ಈ ಎರಡು ಪ್ರಕರಣಗಳಿಂದ ಅವರಿಬ್ಬರನ್ನು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಈ ತೀರ್ಪನ್ನು ಕೂಡ ದಾಭೋಲ್ಕರ್ ಅವರ ಪುತ್ರಿ ಮುಖ್ತಾ ದಾಭೋಲ್ಕರ್ ಮೇಲ್ಮನವಿಯಲ್ಲಿ ಪ್ರಶ್ನಿಸಿದ್ದಾರೆ.

ನ್ಯಾಯವಾದಿ ಅಭಯ್ ನೇವಗಿ ಮೂಲಕ ಸಲ್ಲಿಸಿದ ಮನವಿಯಲ್ಲಿ ಮುಕ್ತಾ ದಾಭೋಲ್ಕರ್, ತನ್ನ ತಂದೆಯನ್ನು ಯೋಜಿಸಿ ಹತೈಗೈಯಲಾಗಿದೆ. ಇದರಲ್ಲಿ ಅತಿ ದೊಡ್ಡ ಪಿತೂರಿ ಇದೆ ಎಂದು ಹೇಳಿದ್ದಾರೆ.

ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಹಾಗೂ ಪೃಥ್ವಿರಾಜ್ ಚೌಹಾಣ್ ಅವರನ್ನು ಒಳಗೊಂಡ ವಿಭಾಗೀಯ ಪೀಠದ ಬುಧವಾರ ವಿಚಾರಣೆ ನಡೆಸಿತು. ಎಲ್ಲಾ ಆರೋಪಿಗಳಿಗೆ, ಸಿಬಿಐಗೆ ನೋಟಿಸು ಜಾರಿ ಮಾಡಿತು.

ಅಲ್ಲದೆ, ಈ ಅರ್ಜಿಯ ವಿಚಾರಣೆಯನ್ನು ಸೆಪ್ಟಂಬರ್ 23ಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News