ನಾನು ಶಾಸಕನಾಗಿ ಚುನಾಯಿತನಾದರೆ, ಎಲ್ಲ ಅವಿವಾಹಿತ ಯುವಕರ ವಿವಾಹ ನೆರವೇರಿಸುತ್ತೇನೆ: NCP ಅಭ್ಯರ್ಥಿ ಭರವಸೆ

Update: 2024-11-07 11:41 GMT

 ರಾಜಾಸಾಹೇಬ್ ದೇಶ್ ಮುಖ್ | PC : Rajesaheb(Bhau)Deshmukh | FACEBOOK 

ಛತ್ರಪತಿ ಸಂಭಾಜಿನಗರ: ನಾನೇನಾದರೂ ಶಾಸಕನಾಗಿ ಚುನಾಯಿತನಾದರೆ, ಕ್ಷೇತ್ರದಲ್ಲಿರುವ ಎಲ್ಲ ಅವಿವಾಹಿತ ಯುವಕರಿಗೂ ವಿವಾಹ ನೆರವೇರಿಸುತ್ತೇನೆ ಎಂದು ಪಾರ್ಲಿ ವಿಧಾನಸಭಾ ಕ್ಷೇತ್ರದ NCP (ಶರದ್ ಪವಾರ್ ಬಣ) ಅಭ್ಯರ್ಥಿ ರಾಜಾಸಾಹೇಬ್ ದೇಶ್ ಮುಖ್ ಆಶ್ವಾಸನೆ ನೀಡುತ್ತಿರುವ ಭಾಷಣದ ವಿಡಿಯೊ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಪಾರ್ಲಿಯಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿರುವ ರಾಜಾಸಾಹೇಬ್ ದೇಶ್ ಮುಖ್, “ವಿವಾಹಗಳನ್ನು ನಿರ್ಧರಿಸುವ ವಿಚಾರಕ್ಕೆ ಬಂದರೆ, ಪಾರ್ಲಿಯಲ್ಲಿನ ಯುವಕರು ಉದ್ಯೋಗ ಹೊಂದಿದ್ದಾರೆಯೆ ಅಥವಾ ಯಾವುದಾದರೂ ವ್ಯಾಪಾರ ನಡೆಸುತ್ತಿದ್ದಾರೆಯೆ ಎಂಬುದನ್ನು ತಿಳಿಯಲು ಜನರು ಬಯಸುತ್ತಾರೆ. ಸರಕಾರ ಉದ್ಯೋಗವನ್ನೇ ಒದಗಿಸದಿರುವಾಗ, ಅವರು ತಾನೆ ಹೇಗೆ ಉದ್ಯೋಗ ಪಡೆಯುತ್ತಾರೆ? ಉಸ್ತುವಾರಿ ಸಚಿವ ಧನಂಜಯ್ ಮುಂಡೆ ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಅಥವಾ ಅಂತಹ ಇನ್ನಿತರ ಚಟುವಟಿಕೆಗಳ ಜವಾಬ್ದಾರಿಯಿಂದ ನುಣುಚಿಕೊಂಡರೆ, ಅವಿವಾಹಿತರು ತಾನೆ ಏನು ಮಾಡುತ್ತಾರೆ? ನಾನು ಅಂತಹ ಎಲ್ಲ ಯುವಕರಿಗೂ ವಿವಾಹ ಮಾಡುತ್ತೇನೆ ಹಾಗೂ ಅವರಿಗೆ ಕೊಂಚ ಜೀವನೋಪಾಯಕ್ಕೂ ದಾರಿ ಮಾಡಿಕೊಡುತ್ತೇನೆ ಎಂದು ಭರವಸೆ ನೀಡುತ್ತೇನೆ” ಎಂದು ಹೇಳಿದ್ದಾರೆ.

ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ನಾಯಕ ಹಾಗೂ ರಾಜ್ಯ ಸಚಿವ ಧನಂಜಯ್ ಮುಂಡೆ ವಿರುದ್ಧ ಬಾಬಾಸಾಹೇಬ್ ದೇಶ್ ಮುಖ್ ಸ್ಪರ್ಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News