ಕಳೆದ ಒಂದು ದಶಕದಲ್ಲಿ 5,000ಕ್ಕೂ ಹೆಚ್ಚು ಭಾರತೀಯ ಮಕ್ಕಳನ್ನು ದತ್ತು ತೆಗೆದುಕೊಂಡ ವಿದೇಶೀಯರು : ಕೇಂದ್ರ ಸರಕಾರ
ಹೊಸದಿಲ್ಲಿ: ಕೇಂದ್ರ ಸರಕಾರದ ಅಧಿಕೃತ ದತ್ತಾಂಶದ ಪ್ರಕಾರ, ಕಳೆದ ಒಂದು ದಶಕದಲ್ಲಿ 5,000ಕ್ಕೂ ಹೆಚ್ಚು ಭಾರತೀಯ ಮಕ್ಕಳನ್ನು ವಿದೇಶೀಯರು ದತ್ತು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಲೋಕಸಭೆಯಲ್ಲಿ ಪ್ರಶ್ನೆದಯೊಂದಕ್ಕೆ ಉತ್ತರಿಸಿದ ಕೇಂದ್ರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್, ಭಾರತೀಯ ಮಕ್ಕಳನ್ನು ದತ್ತು ತೆಗೆದುಕೊಂಡಿರುವ ವಿದೇಶೀಯರು ಅಸಮರ್ಪಕ ರೀತಿಯಲ್ಲಿ ಮಕ್ಕಳನ್ನು ಬೆಳೆಸುತ್ತಿದ್ದಾರೆ ಅಥವಾ ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಸರಕಾರ ಯಾವುದೇ ದೂರನ್ನು ಸ್ವೀಕರಿಸಿಲ್ಲ ಎಂದು ಹೇಳಿದರು.
ದತ್ತಾಂಶದ ಪ್ರಕಾರ, ಕಳೆದ 10 ವರ್ಷಗಳಲ್ಲಿ 4,963 ಭಾರತೀಯ ಮಕ್ಕಳನ್ನು ವಿದೇಶೀಯರು ದತ್ತು ಪಡೆದುಕೊಂಡಿದ್ದಾರೆ. ಈ ಪೈಕಿ ಬಹುತೇಕ ಮಕ್ಕಳನ್ನು ಅಮೆರಿಕ ಪ್ರಜೆಗಳು ದತ್ತು ತೆಗೆದುಕೊಂಡಿದ್ದು, 2,031 ಮಕ್ಕಳನ್ನು ದತ್ತು ಪಡೆದಿದ್ದಾರೆ. ಇದರ ನಂತರ ಇಟಲಿ 1,029, ಸ್ಪೇನ್ 517, ಯುಎಇ 252 ಹಾಗೂ ಮಾಲ್ಟಾ 215 ಮಕ್ಕಳನ್ನು ದತ್ತು ಪಡೆದುಕೊಂಡಿವೆ.