ರಾಷ್ಟ್ರೀಯ ಮಾನವಕ್ಕುಗಳ ಆಯೋಗದ ಅಧ್ಯಕ್ಷ ಹುದ್ದೆ : ವದಂತಿ ನಿರಾಕರಿಸಿದ ಚಂದ್ರಚೂಡ್
Update: 2024-12-20 16:23 GMT
ಹೊಸದಿಲ್ಲಿ : ರಾಷ್ಟ್ರೀಯ ಮಾನವಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ದ ಅಧ್ಯಕ್ಷ ಸ್ಥಾನಕ್ಕೆ ತನ್ನ ಹೆಸರು ಪರಿಗಣನೆಯಲ್ಲಿದೆಯೆಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರು ಅಲ್ಲಗಳೆದಿದ್ದಾರೆ.
‘‘ ಇದು ಸತ್ಯವಲ್ಲ. ಪ್ರಸಕ್ತ, ನಾನು ನನ್ನ ನಿವೃತ್ತಿ ಜೀವನವನ್ನು ಆನಂದಿಸುತ್ತಿದ್ದೇನೆ’’ ಎಂದು ಅವರು ಪಿಟಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಭಾರತದ 50ನೇ ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದ ಚಂದ್ರಚೂಡ್ ಅವರು ನವೆಂಬರ್ 10ರಂದು ನಿವೃತ್ತರಾಗಿದ್ದರು. ಎನ್‌ಎಚ್‌ಆರ್‌ಸಿ ಅಧ್ಯಕ್ಷರಾಗಿದ್ದ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ತನ್ನ ಅಧಿಕಾರಾವಧಿ ಜೂನ್ 1ರಂದು ಕೊನೆಗೊಂಡ ಆನಂತರ ಈ ಹುದ್ದೆಯು ಖಾಲಿಯಾಗಿ ಉಳಿದಿತ್ತು.